Advertisement
ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೆ ತಂದು ಯಶಸ್ವಿಗೊಳಿಸಲಾಗಿದೆ. ಇದರ ಮುಂದುವರಿದ ಭಾಗವೇ “ಶಾಲಾ ಸ್ಪಂದನ’.ಎಲ್ಲ ಅಧಿಕಾರಿಗಳು ಭಾಗಿ ಈ ಕಾರ್ಯಕ್ರಮದಲ್ಲಿ 40 ಮಂದಿ ಸಿಆರ್‌ಪಿಗಳು, 22 ಮಂದಿ ಬಿಆರ್‌ಪಿಗಳು, 20 ಮಂದಿ ಇಸಿಒಗಳು ಸಹಿತ ಐವರು ಬಿಇಒ, ಐವರು ಬಿಆರ್‌ಸಿ, ಮೂವರು ಸಹಾಯಕ ನಿರ್ದೇಶಕರ ಸಹಿತ ಜಿಲ್ಲಾ ಕಚೇರಿಯ ನಾಲ್ವರು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಆಯಾ ವಲಯದಲ್ಲಿ ಒಬ್ಬರು ವಾರದಲ್ಲಿ 5 ಶಾಲೆಗಳಿಗೆ ಭೇಟಿ ನೀಡಿ ಎಲ್ಲ ತರಗತಿಯಲ್ಲಿ ಅರ್ಧ ಗಂಟೆ ಪಾಠ ಮಾಡುತ್ತಾರೆ. ಶಿಕ್ಷಕರು ಪಾಠ ಮಾಡುವ ರೀತಿಯನ್ನು ಗಮನಿಸುತ್ತಾರೆ. ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯನ್ನು ತಿಳಿದುಕೊಳ್ಳುತ್ತಾರೆ. ಮಕ್ಕಳ ಕಲಿಕೆಗೆ ಬೇಕಿರುವ ಸ್ಫೂರ್ತಿ, ಜ್ಞಾನದ ಅಗತ್ಯ ಸಹಿತ ಹಲವಾರು ವಿಚಾರಗಳ ಬಗ್ಗೆ ಮಕ್ಕಳಿಗೆ ಬೆಂಬಲ ನೀಡಲಿದ್ದಾರೆ. ಕಲಿಕೆಗೆ ಒತ್ತು
ಈ ಸಂದರ್ಭದಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಮತ್ತಷ್ಟು ಉತ್ತೇಜನ ನೀಡಲಾಗುತ್ತದೆ. ಹೆಚ್ಚುವರಿ ತರಗತಿ, ಹೋಂ ವರ್ಕ್ ಸಹಿತ ಇತರ ಕಲಿಕಾ ಉಪಕ್ರಮಗಳನ್ನು ತೆಗೆದುಕೊಂಡು ಪ್ರೋತ್ಸಾಹ ನೀಡಲಾಗುತ್ತದೆ. ಶಿಕ್ಷಕರೊಂದಿಗೆ ಸಭೆ ನಡೆಸಿ ಶಾಲೆಯ ಎಲ್ಲ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ.
Related Articles
Advertisement
ಖಾಸಗಿ ಶಾಲೆಗಳಿಗೂ ವಿಸ್ತರಣೆಗೆ ಚಿಂತನೆ
ಈ ಯೋಜನೆಯನ್ನು ಪ್ರಾರಂಭಿಕ ಹಂತದಲ್ಲಿ ಸರಕಾರಿ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಧಿಕಾರಿಗಳು ಭೇಟಿ ನೀಡುವ ಸರಕಾರಿ ಶಾಲೆಗಳ ಬಳಿ ಖಾಸಗಿ ಶಾಲೆಗಳಿದ್ದರೆ ಈ ಶಾಲೆಗಳಿಗೂ ತೆರಳಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶೈಕ್ಷಣಿಕ ಬೆಂಬಲ ನೀಡಲು ಉದ್ದೇಶಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹುರಿದುಂಬಿಸುವ ಉದ್ದೇಶದಿಂದ ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ. 21ರಂದು ಶಾಲಾ ಸ್ಪಂದನ ಜಾರಿಗೆ ಬರಲಿದೆ. ಶೈಕ್ಷಣಿಕವಾಗಿ ಮಕ್ಕಳು ಮತ್ತು ಶಿಕ್ಷಕರಿಗೆ ಬೆಂಬಲ ನೀಡುವುದು ಇದರ ಉದ್ದೇಶ.
– ಎನ್.ಎಚ್. ನಾಗೂರ,
ಉಡುಪಿ ಡಿಡಿಪಿಐ