Advertisement
ಸೋಮವಾರ ಜಿಲ್ಲೆಯ ವಿವಿಧ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಶಾಲಾರಂಭಕ್ಕಾಗಿ ನಡೆಸುತ್ತಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ ಅವರು, ಶಾಲಾ ಆರಂಭೋತ್ಸವವನ್ನು ಹಬ್ಬದಂತೆ ಆಚರಿಸುತ್ತಿದ್ದು, ಮಕ್ಕಳಿಗೆ ಆಹ್ಲಾದಕರ ವಾತಾವರಣ ಸೃಷ್ಟಿಗೆ ಸೂಚನೆ ನೀಡಿದರು.
Related Articles
Advertisement
ಇವುಗಳ ಜತೆಗೆ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 16 ಮೊರಾರ್ಜಿದೇಸಾಯಿ, 4 ಕಿತ್ತೂರು ರಾಣಿ ಚೆನ್ನಮ್ಮ, 3 ಅಂಬೇಡ್ಕರ್ ಹಾಗೂ 1 ಏಕಲವ್ಯ ವಸತಿ ಶಾಲೆಗಳಿದ್ದು, ಇಲ್ಲಿಯೂ 1200ಕ್ಕೂ ಹೆಚ್ಚು ಮಕ್ಕಳು ಶಾಲೆಯತ್ತ ಮೇ 31 ರಂದು ಆಗಮಿಸಲಿದ್ದಾರೆ. ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು ತಾಲ್ಲೂಕುಗಳಲ್ಲಿ ತಲಾ ಒಂದೊಂದು ಕಸ್ತೂರಿ ಬಾ ಶಾಲೆ ಹಾಗೂ ಆದರ್ಶ ಶಾಲೆಗಳು ಇದ್ದು, ಅವುಗಳಲ್ಲೂ ಸಹಾ ಮೇ 29,30 ರಂದು ಸಿದ್ದತೆ ನಡೆಸಿ ಮೇ 31 ರಂದೇ ಶಾಲಾ ಪ್ರಾರಂಭೋತ್ಸವ ಆಚರಿಸಲು ಸೂಚಿಸಲಾಗಿದೆ.
ಶಾಲೆಗಳು ಆರಂಭಕ್ಕೆ ಹಬ್ಬದಂತೆ ಸಿಹಿ ಊಟ : ಪ್ರಾರಂಭೋತ್ಸವದಂದು ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಚಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯವನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವ ಕಾರ್ಯ ಮಾಡುವಂತೆ ಸೂಚಿಸಲಾಗಿದೆ. ಒಂದನೇ, ಆರನೇ ಹಾಗೂ 8ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಆಹ್ಲಾದಕರ ಸಂದರ್ಭವಾಗಿರುವಂತೆ ಶಿಕ್ಷಕರು ಗಮನಹರಿಸಬೇಕು, ಇದು ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡುತ್ತದೆ ಎಂದು ಇಲಾಖೆ ಸೂಚಿಸಿದೆ ಎಂದರು.
ಪಠ್ಯಪುಸ್ತಕ , ಸಮವಸ್ತ್ರ ವಿತರಣೆ: ಶಾಲಾ ಹಬ್ಬಕ್ಕೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಗ್ರಾಮದ ಗಣ್ಯರನ್ನು ಕರೆಸಿ ಶಾಲಾ ಹಬ್ಬವನ್ನು ಸಡಗರದಿಂದ ಆಚರಿಸಬೇಕು ಮತ್ತು ಅಂದು ಮಕ್ಕಳಿಗೆ ಸಿಹಿ ಹಂಚುವುದು ಜತೆಗೆ ಇಲಾಖೆ ನೀಡಿರುವ ಪಠ್ಯಪುಸ್ತಕ, ಸಮವಸ್ತ್ರ ಮೊದಲ ದಿನವೇ ವಿತರಿಸಲು ಸೂಚಿಸಲಾಗಿದೆ. ಈ ನಡುವೆ ಇಲಾಖೆ ಮಿಂಚಿನ ಸಂಚಾರಕ್ಕಾಗಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಜೂ.1 ರಿಂದ 15 ರವರೆಗೂ ತಂಡಗಳು ದಿಢೀರ್ ಶಾಲೆಗಳಿಗೆ ಭೇಟಿ ನೀಡಲಿವೆ, ಶಾಲೆಗಳಲ್ಲಿ ಶಾಲಾ ಆರಂಭೋತ್ಸವ ಮಾಡಿರುವ ಕುರಿತು, ಪಠ್ಯಪುಸ್ತಕ,ಬಟ್ಟೆ ವಿತರಣೆ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.