Advertisement

ಬಾಲಕಿ ಮೇಲೆ ಅತ್ಯಾಚಾರ: ಸರಕಾರಿ ಶಾಲೆಯ ಪ್ರಿನ್ಸಿಪಾಲ್‌ ಸೆರೆ

07:05 PM Sep 12, 2017 | udayavani editorial |

ಸೇಹೋರ್‌, ಮಧ್ಯಪ್ರದೇಶ : ಎಂಟನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಶಾಲಾ ಆವರಣದಲ್ಲೇ ಅತ್ಯಾಚಾರ ಎಸಗಿದ 45 ವರ್ಷ ಪ್ರಾಯ ಸರಕಾರಿ ಶಾಲೆಯ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಈ ಅಮಾನವೀಯ ಘಟನೆಯಿಂದ ಕ್ರುದ್ದರಾದ 14 ವರ್ಷ ಪ್ರಾಯದ ಹುಡುಗಿಯ ಹೆತ್ತವರು ತಿಲಕ್‌ ಮಿಡ್ಲ್ ಸ್ಕೂಲ್‌ನ ಆರೋಪಿ ಪ್ರಾಂಶುಪಾಲ ಅಖೀಲೇಶ್‌ ಮಾಳವೀಯ ನಿಗೆ ಧರ್ಮದೇಟು ಕೊಟ್ಟಿರುವುದಾಗಿ ತಿಳಿದು ಬಂದಿದೆ.

ಪೊಲೀಸರು ಅತ್ಯಾಚಾರಿ ಮಾಳವೀಯನನ್ನು ಐಪಿಸಿ ಸೆ.354ರಡಿ ಮತ್ತು ಪೋಕ್‌ಸೋ ಕಾಯಿದೆಯಡಿ ಬಂಧಿಸಿದ್ದಾರೆ. 

ವಿಷಯವು ಗಂಭೀರವಾಗಿರುವುದರಿಂದ ನಾವು ಆರೋಪಿ ಮಾಳವೀಯನನ್ನು ಬಂಧಿಸಿದ್ದೇವೆ ಎಂದು ಕೋತ್ವಾಲಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅಜಯ್‌ ನಾಯರ್‌ ಹೇಳಿದ್ದಾರೆ. 

ಹಾಗಿದ್ದರೂ ಆರೋಪಿ ಪ್ರಾಂಶುಪಾಲ, “ನಾನು ಅಮಾಯಕನಾಗಿದ್ದು ನನ್ನ ಮೇಲಿನ ಆರೋಪಗಳೆಲ್ಲ ಸುಳ್ಳು’ ಎಂದಿದ್ದಾನೆ. ಹುಡುಗಿಯ ಪುಸ್ತಕದಲ್ಲಿ  ಪ್ರೇಮ ಪತ್ರವೊಂದನ್ನು ನಾನು ಕಂಡು ಆಕೆಯ ಹೆತ್ತವರಿಗೆ ವಿಷಯ ತಿಳಿಸಿದೆ; ಆದರೆ ಅವರು ನನ್ನ ಮೇಲೆ ಶಂಕೆಗೊಂಡು ನನಗೆ ಹೊಡೆದರು ಎಂದು ಮಾಳವೀಯ ಹೇಳಿದ್ದಾನೆ.

Advertisement

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ನಾಯರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next