ಬಾಗಲಕೋಟೆ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿಗದಿತ ಅವಧಿಗೆ ಆರಂಭಗೊಳ್ಳದಿದ್ದ ಶಾಲೆಗಳು ಸೋಮವಾರ ಕೊರೊನಾ ಭೀತಿ ಇಲ್ಲದೇ ಆರಂಭಗೊಂಡಿವೆ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಮಕ್ಕಳ ಚಿಲಿಪಿಲಿ ಕಂಡು ಬಂದಿದ್ದು, ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ, ಶಿಕ್ಷಕರು ಹಾಗೂ ಸಿಬ್ಬಂದಿ ಆರತಿ ಎತ್ತಿ, ಕೈಗೆ ಹೂ ಕೊಟ್ಟು ಸ್ವಾಗತಿಸಿದರು.
ಸರಕಾರ ಈ ಬಾರಿ ಮಕ್ಕಳು ಯಾವುದೇ ಕಾರಣಕ್ಕೆ ಕಲಿಕೆಯಿಂದ ಹೊರಗುಳಿಯಬಾರದೆಂಬ ಉದ್ದೇಶದಿಂದ ಕಲಿಕಾ ಚೇತರಿಕೆ ಎಂಬ ವಿನೂತನ ಯೋಜನೆ ಜಾರಿಗೊಳಿಸಿ ಈ ಹಿಂದೆ ಮಕ್ಕಳ ಪಠ್ಯದಲ್ಲಾದ ದೋಷಗಳನ್ನು, ಅವರಿಗೆ ಹೊರೆಯಾಗುವಂತಹ ಪಠ್ಯಕ್ರಮ ಪ್ರಥಮದಿಂದ ಮುಕ್ತಗೊಳಿಸುವ ಹಾಗೂ ಕಳೆದ ಎರಡು ವರ್ಷಗಳ ಹಿಂದೆ ಮಹಾಮಾರಿ ಕೊರೊನಾ ಸಂಕಷ್ಟದಲ್ಲಿ ಮೊದಲನೇ ತರಗತಿಗೆ ಬರಬೇಕಾದ ಮಕ್ಕಳು ಈಗ ಮೂರನೇ ತರಗತಿಯ ಮಕ್ಕಳಲ್ಲಿ ಪರಿವರ್ತನೆಯಾಗುತ್ತಿರುವುದರಿಂದ ಅವರಿಗೆ ಶೂನ್ಯ ಜ್ಞಾನ ಒದಗಿ ಬಂದಿರುತ್ತದೆ.
ಆ ಒಂದು ತೊಂದರೆ ನಿವಾರಣೆ ಸರಿಪಡಿಸುವ ಉದ್ದೇಶದಿಂದ ಈ ಬಾರಿ ವರ್ಷವಿಡಿ ಪಠ್ಯ ಮಾಡದೇ ಪಠ್ಯೇತರ ಚಟುವಟಿಕೆಗಳಾದ ಚಿತ್ರ, ನಾಟಕ, ಕ್ರೀಡೆ, ಮನರಂಜನೆ ಮುಂತಾದ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳಿಗ ಶಾಲೆಯಲ್ಲಿ ಭಯದ ವಾತಾವರಣ ತೊಲಗಿ ಶಾಲೆ ಆಕರ್ಷಣೀಯ ಕೇಂದ್ರವಾಗುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಸರಕಾರಿ ಶಾಲೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳ ಮಾಹಿತಿ ಹಾಗೂ ಶಿಕ್ಷಣ ವಂಚಿತ ಮಕ್ಕಳಿಗೆ ಶಾಲೆಗೆ ಪ್ರವೇಶಿಸುವ ಕುರಿತಾದ ಜಾಗೃತಿ ಜಾಥಾ, ಪಾಲಕರ ಮನಪರಿವರ್ತನೆ, ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವ ಉದ್ಧೇಶದಿಂದ ಈ ಹಿಂದಿನ ವರ್ಷಗಳಿಗಿಂತ ಈ ಬಾರಿ ವಿಭಿನ್ನವಾಗಿ ಶಿಕ್ಷಣ ಪದ್ದತಿ ಜಾರಿಗೊಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಮಂಜುನಾಥ ಮಾದರ, ಪ್ರೌಢಶಾಲಾ ಅಧ್ಯಕ್ಷ ಚಿದಾನಂದ ಕೋವಳ್ಳಿ, ಗ್ರಾಪಂ ಅಧ್ಯಕ್ಷ ರುದ್ರಪ್ಪ ಮೆನಸಗಿ, ಗ್ರಾ.ಪಂ. ಸದಸ್ಯರಾದ ಮೈಲಾರೇಶ ನೀಲಣ್ಣವರ, ಶಿವಪ್ಪ ಕೋವಳ್ಳಿ, ಗ್ರಾಮದ ಹನಮಂತ ಕೆಂಪನ್ನವರ, ದೊಡ್ಡಪ್ಪ ಪೂಜಾರಿ, ಈರಪ್ಪ ಚೂರಿ, ಹನಮಂತ ಪಸಂದವರ, ಗಣೇಶ ನದಾಫ್, ಪ್ರೌಢಶಾಲಾ ಮುಖ್ಯ ಶಿಕ್ಷಕ ರವಿ ಬಾಳಕ್ಕನವರ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಂ.ಎಸ್.ಅಳ್ಳಿಮಟ್ಟಿ, ಎರಡು ಶಾಲಾ ಶಿಕ್ಷಕರಾದ ವೈ.ಎಚ್. ಭಜಂತ್ರಿ, ಎಸ್.ಟಿ.ಮಾಚಾ, ಡಿ.ಬಿ.ಅಮೀನಗಡ, ಪಿ.ಐ. ಡವಲಗಿ, ಸುಜಾತಾ ಬನ್ನಟ್ಟಿ, ಮೀನಾಕ್ಷಿ ಕೋರಿ, ಸುರೇಶ ದೊಡಮನಿ, ಲಕ್ಷ್ಮಣ ಅಕ್ಯಾನವರ, ಎನ್.ವೈ. ಹೊಸಮನಿ, ಪಿ.ಬಿ. ದೇಶಪಾಂಡೆ ಉಪಸ್ಥಿತರಿದ್ದರು.