Advertisement

ಸ್ವಂತ ಕಟ್ಟಡವಿಲ್ಲದೆ ಸೊರಗುತ್ತಿದೆ ಶಾಲೆ

01:31 PM Jan 01, 2020 | Suhan S |

ಚಿಕ್ಕೋಡಿ: ನಗರದ ಹೃದಯ ಭಾಗದಲ್ಲಿ ಇರುವ ವೆಂಕಟೇಶ ಗಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯು ಅನೇಕ ದಶಕಗಳಿಂದ ಸ್ವಂತ ಕಟ್ಟಡ ಇಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ನಿತ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

Advertisement

ಸ್ಥಳೀಯ ವೆಂಕಟೇಶ ಮಂದಿರ ವ್ಯವಸ್ಥಾಪಕ ಕಮಿಟಿಗೆ ಸೇರಿದ ಕಟ್ಟಡ ಮೂರು ಕೋಣೆಯಲ್ಲಿ ಬಾಡಿಗೆ ಆಧಾರದ ಮೇಲೆ ಶಾಲೆ ನಡೆಯುತ್ತಿದೆ. ಈ ಶಾಲೆಯಲ್ಲಿ ಒಂದರಿಂದ ಐದನೆ ತರಗತಿ ನಡೆಯುತ್ತಿದ್ದು, ಶಾಲೆಯಲ್ಲಿ 32 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮೂರು ಕೊಠಡಿಯಿದ್ದು, ಒಂದರಲ್ಲಿ ಮಧ್ಯಾಹ್ನ ಬಿಸಿಯೂಟ ತಯಾರು ಮಾಡಲು ಬಳಕೆ ಮಾಡಲಾಗುತ್ತದೆ. ಇದರಿಂದ ಕೇವಲ ಎರಡು ಕೊಠಡಿಗಳಲ್ಲಿ ತರಗತಿ ನಡೆಯುತ್ತಿವೆ.

ಶಾಲೆಯಲ್ಲಿ ಶೌಚಾಲಯವೆ ಇಲ್ಲ: ದೇಶದಲ್ಲಿ ಎಲ್ಲ ಕಡೆ ಶೌಚಾಲಯ ನಿರ್ಮಾನ ಹಾಗೂ ಸ್ವಚ್ಛತೆ ಬಗ್ಗೆ ಅಭಿಯಾನ ಭರದಿಂದ ನಡೆದಾಗ ಈ ಶಾಲೆಯಲ್ಲಿ ಶೌಚಾಲಯವೇ ಇಲ್ಲದೇ ಇರುವುದು ದುರ್ದೈವದ ಸಂಗತಿ. ಇದರಿಂದ ಇಡೀ ದಿನ ವಿದ್ಯಾರ್ಥಿಗಳ ಜೊತೆ ಶಿಕ್ಷಕಿಯರು ಶೌಚಾಲಯಕ್ಕೆ ಅಲೆದಾಡಬೇಕಾದ ಅನುವಾರ್ಯತೆ ಇದೆ. ಅನೇಕ ಪಾಲಕರು ತನ್ನ ಹೆಣ್ಣು ಮಕ್ಕಳಿಗೆ ಈ ಶಾಲೆಗೆ ಕಳಿಸಲು ಹಿಂದೆಟ್ಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ರಸ್ತೆಯೇ ಶಾಲಾ ಮೈದಾನ: ಒಂದು ಶಾಲೆ ಎಂದರೇ ಅಲ್ಲಿ ಮೂಲಭೂತ ಸೌಲಭ್ಯ ಇರಬೇಕೆನ್ನುವುದು ಸಹಜ, ಆದರೆ ಈ ಶಾಲೆಯ ಮಕ್ಕಳು ಆಟವಾಡಲು ಮೈದಾನ ಇಲ್ಲದಂತಾಗಿದೆ. ಶಾಲೆಯ ಮುಂಭಾಗದಲ್ಲಿ ಇರುವ ರಸ್ತೆಯ ಮೇಲೆ ಆಟ ಆಡುತ್ತಾರೆ. ಹೀಗಾಗಿ ರಸ್ತೆಯ ಮೇಲೆ ಹೋಗಿ ಬರುವ ವಾಹನಗಳಿಂದ ಆಗುವ ಅಪಘಾತದ ಬೀತಿ ಮಕ್ಕಳನ್ನು ಕಾಡುತ್ತಿದೆ. ವೆಂಕಟೇಶ ಮಂದಿರದ ಕಟ್ಟಡದಲ್ಲಿ ಇರುವ ಶಾಲೆಯ ಅನಾನುಕೂಲತೆ ಗುರ್ತಿಸಿ 2015ರಲ್ಲಿ ಗಾಲೆಗಲ್ಲಿಯ ಹಳೆ ಮರಾಠಿ ಶಾಲೆಯ ಹತ್ತಿರ 480 ಅಳತೆಯ ಜಾಗ ಮೀಸಲಿಡಲಾಗಿದೆ.

ಈಗ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿನಲ್ಲಿದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಕಟ್ಟಡಕ್ಕಾಗಿ ಶಿಕ್ಷಣ ಇಲಾಖೆ ಯಾವುದೇ ಹೆಜ್ಜೆ ಇಟ್ಟಿಲ್ಲ, ಇದಕ್ಕಾಗಿ ಯಾವುದೇ ಅನುದಾನ ಮಂಜೂರಾಗಿಲ್ಲ, ಇದರಿಂದ ಇನ್ನು ಎಷ್ಟು ವರ್ಷ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಾಡಿಗೆ ಕೊಠಡಿಯಲ್ಲಿ ಶಿಕ್ಷಣ ಪಡೆಯಬೇಕು ಎನ್ನುವ ಗೊಂದಲದಲ್ಲಿ ಮಕ್ಕಳ ಪಾಲಕರು ಇದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿ ಧಿಗಳು ಈ ಶಾಲೆಯ ಕಟ್ಟಡ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಬೇಕು ಎನ್ನುವುದು ಮಕ್ಕಳ ಪಾಲಕರ ಒತ್ತಾಯವಾಗಿದೆ.

Advertisement

ಶಾಲಾ ಕಟ್ಟಡ ಕಟ್ಟಲು ಇಲ್ಲಿವರೆಗೆ ಜಾಗದ ಸಮಸ್ಯೆ ಇತ್ತು. ಇತ್ತಿಚೀಗೆ ಪುರಸಭೆಯವರು ಜಾಗವನ್ನು ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಅನುದಾನ ಕೇಳಲಾಗಿದೆ.. ದೇವಸ್ಥಾನ ಹತ್ತಿರ ಇರುವದರಿಂದ ಶೌಚಾಲಯ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಅನುದಾನ ಬಂದ ತಕ್ಷಣವೇ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು. ಬಿ.ಎ. ಮೇಕನಮರಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಚಿಕ್ಕೋಡಿ

Advertisement

Udayavani is now on Telegram. Click here to join our channel and stay updated with the latest news.

Next