ಕೊಟ್ಟಿಗೆಹಾರ : ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದಾಗ ಮಾತ್ರ ಸಮಾಜದಲ್ಲಿ ಸವಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಫಲ್ಗುಣಿ ಗ್ರಾ.ಪಂ ಪಿಡಿಓ ಚಂದ್ರಾವತಿ ಹೇಳಿದರು.
ನಿಡುವಾಳೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುಎಸ್‌ಟಿ ಗ್ಲೋಬಲ್ ಅಂತರಾಷ್ಟ್ರೀಯ ಸಂಸ್ಥೆಯ ವತಿಯಿಂದ ಕಲಿಕಾ ಸಾಮಾಗ್ರಿಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫಲ್ಗುಣಿ ಗ್ರಾ.ಪಂ ಪಿಡಿಓ ಚಂದ್ರಾವತಿ ಅವರು, ಯುಎಸ್‌ಟಿ ಗ್ಲೋಬಲ್ ಅಂತರಾಷ್ಟ್ರೀಯ ಸಂಸ್ಥೆಯ ವತಿಯಿಂದ ಗ್ರಾಮೀಣ ಭಾಗದ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದ್ದು ಯುಎಸ್‌ಟಿ ಗ್ಲೋಬಲ್ ಅಂತರಾಷ್ಟೀಯ ಸಂಸ್ಥೆಯ ಉದ್ಯೋಗಿಗಳಾದ ಅರವಿಂದ್ ಗೋಪಿನಾಥ್ ಹಾಗೂ ಲತಾ ಸನಾಲ ಅವರ ಮೂಲಕ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ ಎಂದರು.
ನಿಡುವಾಳೆ ಗ್ರಾ.ಪಂ ಅಧ್ಯಕ್ಷೆ ಶೃತಿ ಮಾತನಾಡಿ, ಯುಎಸ್‌ಟಿ ಗ್ಲೋಬಲ್ ಅಂತರಾಷ್ಟ್ರೀಯ ಸಂಸ್ಥೆಯ ವತಿಯಿಂದ ಬ್ಯಾಗ್ ಸೇರಿದಂತೆ ಪ್ರತಿ ವಿದ್ಯಾರ್ಥಿಗಳಿಗೆ 1 ಸಾವಿರ ಮೌಲ್ಯದ ಕಲಿಕಾ ಸಾಮಾಗ್ರಿಗಳನ್ನು ನಿಡುವಾಳೆ ಸಹಿಪ್ರಾ ಶಾಲೆಯ ೭೦ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲಿ ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಗುರುರಾಜ್, ಉಪಾಧ್ಯಕ್ಷರಾದ ಸುಧಾ, ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ, ಸದಸ್ಯೆ ಗುಲಾಬಿ, ಮುಖ್ಯ ಶಿಕ್ಷಕ ಪೂರ್ಣೆಶ್ ವಿ.ಪಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಪರೀಕ್ಷಿತ್ ಜಾವಳಿ, ಮಹೇಶ್ ವಾಟೆಖಾನ್ ಮುಂತಾದವರು ಇದ್ದರು.