Advertisement
ಈ ಪೈಕಿ 6ರಿಂದ 8ನೇ ತರಗತಿ ಮಕ್ಕಳಿಗೆ ಪಾಠ ಮಾಡುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಹುದ್ದೆಗಳು ಖಾಲಿ ಉಳಿದಿವೆ. ಒಟ್ಟಾರೆ ರಾಜ್ಯದಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳಲ್ಲಿ ಶೇ.27.74ರಷ್ಟು ಖಾಲಿ ಇವೆ.
ಶಿಕ್ಷಕರು ಮತ್ತು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮುನ್ನ 1,88,532 ಪ್ರಾಥಮಿಕ ಶಾಲಾ ವಿಭಾಗದ ವೃಂದಬಲವಾರು ಹುದ್ದೆಗಳಿದ್ದವು. ಈ ವರ್ಷದ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದರಲ್ಲಿ ಒಂದು ಹುದ್ದೆ ಕಡಿತವಾಗಿದ್ದು, ವೃಂದಬಲವಾರು ಮಂಜೂರಾದ ಹುದ್ದೆ ಗಳ ಸಂಖ್ಯೆ 1,88,531ಕ್ಕೆ ಕುಸಿದಿದೆ. ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು (ಪಿ.ಎಸ್.ಟಿ.), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿ.ಪಿ.ಟಿ.), ದೈಹಿಕ ಶಿಕ್ಷಣ ಶಿಕ್ಷಕರು ಹಿರಿಯ ಶ್ರೇಣಿ – ಐಐ ಮತ್ತು ದರ್ಜೆ – ಐಐ, ಸಂಗೀತ ಮತ್ತು ಚಿತ್ರಕಲಾ ಶಿಕ್ಷಕರ ಸಂಖ್ಯೆಯಲ್ಲಿ ಸರಕಾರ ಯಥಾಸ್ಥಿತಿ ಕಾಪಾಡಿಕೊಂಡು, ನರ್ಸರಿ ಶಾಲಾ ಶಿಕ್ಷಕರ ಒಂದು ಹುದ್ದೆ ಕಡಿತ ಮಾಡಿದೆ. ಸರಕಾರಿ ಶಾಲೆಗಳ ಸಂಖ್ಯೆ ಮತ್ತು ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದರೂ ಶಿಕ್ಷಕರ ಹುದ್ದೆ ಕಡಿಮೆ ಮಾಡಿಲ್ಲ.
Related Articles
Advertisement