Advertisement
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಸಮಾವೇಶ -2024ರಲ್ಲಿ ಮಾತನಾಡಿ, ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಶಿಕ್ಷಣ ಇಲಾಖೆ ರೂಪಿಸಿರುವ “ಸಮತ್ವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ರಾಜ್ಯದಲ್ಲಿ 43 ದೊಡ್ಡ ಕಂಪೆನಿಗಳು 4 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಲಾಭದಲ್ಲಿದ್ದು, ಅದರಲ್ಲಿ 8063 ಕೋಟಿ ರೂ. ಸಿಎಸ್ಆರ್ ನಿಧಿ ನೀಡುತ್ತಿವೆ. ಇದೊಂದು ದೇಶಕ್ಕೆ ಮಾದರಿ ಕಾರ್ಯಕ್ರಮವಾಗಿದ್ದು, ನಾನೇ ನಮ್ಮೂರಲ್ಲಿ ಶಾಲೆಗಾಗಿ ಭೂಮಿಯನ್ನು ದಾನ ಮಾಡಿದ್ದೇನೆ, ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ ಎಂದರು.
ಇದೇ ವೇಳೆ ಹಲವು ಕಂಪೆನಿಗಳು ಸರಕಾರದ ಜತೆ ಶಾಲೆಗಳ ಅಭಿವೃದ್ಧಿ ಬಗೆಗಿನ ಒಟ್ಟು 68 ಕೋಟಿ ರೂ. ವೆಚ್ಚದ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಹಾಗೆಯೇ ಸಮತ್ವ’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಲಾಯಿತು.
ಪ್ರತೀ 3 ಗ್ರಾ.ಪಂ.ಗೆ 1 ಮಾದರಿ ಶಾಲೆಪ್ರಸ್ತುತ ಇರುವ ಶಾಲೆಗಳ ಪುನಶ್ಚೇತನಕ್ಕೆ 4 ಕೋಟಿ ರೂ. ಮತ್ತು ಹೊಸದಾಗಿ ಶಾಲೆ ನಿರ್ಮಾಣಕ್ಕೆ 10 ಕೋಟಿ ರೂ. ವೆಚ್ಚವಾಗಲಿದೆ. 3 ಗ್ರಾ.ಪಂ.ಗೆ 1 ಮಾದರಿ ಶಾಲೆ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಬೆಳಗಾವಿ ವಿಭಾಗದಲ್ಲಿ 143 ಶಾಲೆ, ಕಲಬುರಗಿ ವಿಭಾಗದಲ್ಲಿ 145 ಶಾಲೆ, ಮೈಸೂರು ವಿಭಾಗದಲ್ಲಿ 109 ಶಾಲೆ, ಬೆಂಗಳೂರು ವಿಭಾಗದಲ್ಲಿ 103 ಶಾಲೆಯನ್ನು ಒಟ್ಟು 2,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿ ಇದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹೇಳಿದರು. ರಾಜ್ಯವ್ಯಾಪಿ ಪ್ರಿ ನರ್ಸರಿ ಶಾಲೆ ಆರಂಭ
ಕಲ್ಯಾಣ ಕರ್ನಾಟಕದ ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದ್ದು, 38 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲಾಗುತ್ತದೆ. ಎಲ…ಕೆಜಿಯಿಂದ 12ನೇ ತರಗತಿವರೆಗೂ ಒಂದೇ ಆವರಣದಲ್ಲಿ ಶಿಕ್ಷಣ ಸಿಗುವಂತೆ ಮಾಡುವ ಗುರಿಯಿದೆ. ಶೀಘ್ರದಲ್ಲೇ 5 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.