Advertisement

“ಶಾಲಾ ಸಂಪರ್ಕ ಸೇತು’: 10 ಕಾಲುಸಂಕ ಪೂರ್ಣ

11:09 PM Feb 14, 2020 | Team Udayavani |

ಬಂಟ್ವಾಳ : ಹಿಂದೆ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ ಮಹಾತ್ವಾಕಾಂಕ್ಷಿ ಯೋಜನೆಯಾದ “ಶಾಲಾ ಸಂಪರ್ಕ ಸೇತು’ನಲ್ಲಿ ಬಂಟ್ವಾಳ ತಾಲೂಕಿಗೆ ಒಟ್ಟು 191.87 ಲಕ್ಷ ರೂ.ಗಳಲ್ಲಿ 28 ಕಾಲುಸಂಕಗಳು ಮಂಜೂರಾಗಿದ್ದು, ಅವುಗಳಲ್ಲಿ 10 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.

Advertisement

ಗ್ರಾಮೀಣ ಭಾಗಗಳಿಂದ ಸರಕಾರಿ ಶಾಲೆ ಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳುವುದಕ್ಕೆ ಅನಾನುಕೂಲವಾಗುವ ರೀತಿಯಲ್ಲಿ ಕೆಲವೊಂದು ತೋಡುಗಳು ಅಡ್ಡಲಾಗಿ ಹರಿಯುತ್ತಿದ್ದು, ವಿದ್ಯಾರ್ಥಿಗಳು ಸುತ್ತು ಬಳಸಿ ಅಥವಾ ಅಪಾಯಕಾರಿ ರೀತಿಯಲ್ಲಿ ತೋಡುಗಳನ್ನು ದಾಟಬೇಕಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು.

ಇದರ ಅನುಷ್ಠಾನ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಮಾಡುತ್ತಿದ್ದು, ಬಂಟ್ವಾಳ ತಾ|ನ 28ರ ಪೈಕಿ 10 ಪೂರ್ಣಗೊಂಡಿದ್ದು, 2 ಕಾಮಗಾರಿ ಪ್ರಗತಿಯಲ್ಲಿವೆ. 12 ಕಾಲುಸಂಕಗಳು ಟೆಂಡರ್‌ ಹಂತದಲ್ಲಿದ್ದು, 3ರ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಲಿದೆ. ಒಂದು ಕಾಲುಸಂಕಕ್ಕೆ ನಿವೇಶನದ ತಕರಾರು ಇದೆ ಎಂದು ಇಲಾಖೆ ಹೇಳುತ್ತಿದೆ.

ಕೆದಿಲ ಗ್ರಾಮದ ನೇರಳಕಟ್ಟೆ ಶಾಲಾ ಸಂಪರ್ಕಕ್ಕೆ ಮಿತ್ತಪೆರಾಜೆ- ಶಾಂತಿಲ ದಲ್ಲಿ 3.50 ಲಕ್ಷ ರೂ.ಗಳ ಕಾಲುಸಂಕಕ್ಕೆ ಸ್ಲಾéಬ್‌ ಅಳವಡಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕನ್ಯಾನ ಗ್ರಾಮದ ಕನ್ಯಾನ ಶಾಲಾ ಸಂಪರ್ಕಕ್ಕೆ ಜಲಕದಗುಂಡಿಯಲ್ಲಿ 5.75 ಲಕ್ಷ ರೂ.ಗಳ ತಳಪಾಯದ ಕೆಲಸ ಪ್ರಗತಿಯಲ್ಲಿದೆ. ನಾವೂರು ಗ್ರಾಮದ ನಾವೂರು ಶಾಲಾ ಸಂಪರ್ಕದ ಕಲಮೆಯಲ್ಲಿ 5.90 ಲಕ್ಷ ರೂ.ಗಳ ಕಾಲುಸಂಕ ನಿರ್ಮಾಣಕ್ಕೆ ನಿವೇಶ‌ನದ ತಕರಾರಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪಂಜಿಕಲ್ಲು ಗ್ರಾಮದ ಕೇಳೊªàಡಿಯಲ್ಲಿ 8.75 ಲಕ್ಷ ರೂ.ಗಳ ಕಾಲುಸಂಕ ನಿರ್ಮಾಣ, ಫಜೀರು ಗ್ರಾಮದ ಅರ್ಕಾನ ಶಾಲಾ ಸಂಪರ್ಕಕ್ಕೆ ಅಕ್ಕರೆಯಲ್ಲಿ 5.75 ಲಕ್ಷ ರೂ.ಗಳ ಕಾಲುಸಂಕ ನಿರ್ಮಾಣ, ಫಜೀರು ಗ್ರಾಮದ ಫಜೀರು ಶಾಲಾ ಸಂಪರ್ಕಕ್ಕೆ ಪೂಪಾಡಿಕಟ್ಟೆಯಲ್ಲಿ 8.25 ಲಕ್ಷ ರೂ.ಗಳ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದ್ದು, ಮಾರ್ಚ್‌ ವೇಳೆಗೆ ಆರಂಭಿಸಲಿದ್ದೇವೆ ಎನ್ನುತ್ತಾರೆ ಆಧಿಕಾರಿಗಳು.

 ಮಾರ್ಚ್‌ನಲ್ಲಿ ಪ್ರಾರಂಭ
ತಾ|ನಲ್ಲಿ 10 ಕಾಲುಸಂಕಗಳು ಪೂರ್ಣಗೊಂಡಿದ್ದು, ಕೆಲವು ಟೆಂಡರ್‌ ಹಂತದಲಿವೆ. ವೆಂಟೆಡ್‌ ಡ್ಯಾಂಗಳಿಗೆ ಹಲಗೆ ಹಾಕಿ ನೀರು ನಿಲ್ಲಿಸಿರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಮಾರ್ಚ್‌ನಲ್ಲಿ ನೀರು ಕಡಿಮೆಯಾದ ತತ್‌ಕ್ಷಣ ಕಾಮಗಾರಿ ಪ್ರಾರಂಭಿಸಲಾಗುತ್ತದೆ.
 - ಷಣ್ಮುಗಂ, ಎಇಇ, ಪಿಡಬ್ಲ್ಯುಡಿ, ಬಂಟ್ವಾಳ

Advertisement

ಪೂರ್ಣಗೊಂಡಿರುವ ಕಾಲುಸಂಕಗಳು
ಕರೋಪಾಡಿ ಗ್ರಾಮದ ಅಭಿರಾಮ ಪದ್ಯಾಣ- 5.75 ಲಕ್ಷ ರೂ.
ಅನಂತಾಡಿ ಗ್ರಾಮದ ಬಂಟ್ರಿಂಜ ಶಾಲಾ ಸಂಪರ್ಕಕ್ಕೆ ಇಡೆಮುಂಡೇವು- 3.50 ಲಕ್ಷ ರೂ.
ಮಾಣಿ ಗ್ರಾಮದ ಮಾಣಿ ಶಾಲಾ ಸಂಪರ್ಕಕ್ಕೆ ಕಂಬ್ಲಿಗುತ್ತು- 8.25 ಲಕ್ಷ ರೂ.
ಕನ್ಯಾನ ಗ್ರಾಮದ ಕನ್ಯಾನ ಶಾಲಾ ಸಂಪರ್ಕಕ್ಕೆ ಮಂಡ್ನೂರು- 4.25 ಲಕ್ಷ ರೂ.
ಸರಪಾಡಿ ಗ್ರಾಮದ ಸರಪಾಡಿ ಶಾಲಾ ಸಂಪರ್ಕಕ್ಕೆ ಮಠದಬೆಟ್ಟು- 3.50 ಲಕ್ಷ ರೂ.
ಸಜೀಪನಡು ಗ್ರಾಮದ ಸಜೀಪನಡು ಶಾಲಾ ಸಂಪರ್ಕಕ್ಕೆ ಬೊಳಮೆ- 3.50 ಲಕ್ಷ ರೂ.
ಫಜೀರು ಅಡ್ಕ ಶಾಲಾ ಸಂಪರ್ಕಕ್ಕೆ ಕೊಟ್ಟಾರ- 5.75 ಲಕ್ಷ ರೂ.
ಸಜೀಪನಡು ಗ್ರಾಮದ ಕಂಚಿನಡ್ಕಪದವು ಶಾಲಾ ಸಂಪರ್ಕಕ್ಕೆ ಪದವು- 2.90 ಲಕ್ಷ ರೂ.
ಸಜೀಪನಡು ಗ್ರಾಮದ ಸಜೀಪನಡು ಶಾಲಾ ಸಂಪರ್ಕಕ್ಕೆ ಅಂಕದಕೋಡಿ- 3.50 ಲಕ್ಷ ರೂ.
ಕಾವಳಪಡೂರು ಗ್ರಾಮದ ಕೆದ್ದಳಿಕೆ ಶಾಲಾ ಸಂಪರ್ಕಕ್ಕೆ ಮರಮ್ಮ- 5.75 ಲಕ್ಷ ರೂ.

ಟೆಂಡರ್‌ ಹಂತದ ಕಾಲುಸಂಕಗಳು
ಕನ್ಯಾನ ಗ್ರಾಮದ ಶಾಲಾ ಸಂಪರ್ಕಕ್ಕೆ ನಂದರಬೆಟ್ಟುನಲ್ಲಿ- 9.25 ಲಕ್ಷ ರೂ.
ಕನ್ಯಾನ ನೀರ್ಪಾಜೆ ಶಾಲಾ ಸಂಪರ್ಕಕ್ಕೆ ಪಿಲಿಂಗುಳಿ- 5.75 ಲಕ್ಷ ರೂ.
ಮಣಿನಾಲ್ಕೂರು ಗ್ರಾಮದ ಬಡೆಕೊಟ್ಟು ಶಾಲಾ ಸಂಪರ್ಕಕ್ಕೆ ಬತ್ತನಾಡಿ- 6.10 ಲಕ್ಷ ರೂ.
ಸರಪಾಡಿ ಗ್ರಾಮದ ಸರಪಾಡಿ ಶಾಲಾ ಸಂಪರ್ಕಕ್ಕೆ ಹಲ್ಲಂಗಾರು- 8.65 ಲಕ್ಷ ರೂ.
ಸರಪಾಡಿ ಗ್ರಾಮದ ಸರಪಾಡಿ ಶಾಲಾ ಸಂಪರ್ಕಕ್ಕೆ ಅರ್ಬಿ-6.07 ಲಕ್ಷ ರೂ.
ಕರಿಯಂಗಳ ಗ್ರಾಮದ ವಿದ್ಯಾವಿಲಾಸ ಶಾಲಾ ಸಂಪರ್ಕಕ್ಕೆ ಅಮ್ಮುಂಜೆ- 9.25 ಲಕ್ಷ ರೂ.
ಇರಾ-ವರ್ಕಾಡಿ ಗ್ರಾಮದ ಇರಾ- ಬಾಳೆಪುಣಿ ಶಾಲಾ ಸಂಪರ್ಕಕ್ಕೆ ಕುದುಂಬೊಳಚ್ಚಿಲ್‌-15 ಲಕ್ಷ ರೂ.
ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆ ಶಾಲಾ ಸಂಪರ್ಕಕ್ಕೆ ಕೆಳಗಿನಮನೆ- 5.75 ಲಕ್ಷ ರೂ.
ಕೈರಂಗಳ ಗ್ರಾಮದ ಕೈರಂಗಳ ಶಾಲಾ ಸಂಪರ್ಕಕ್ಕೆ ಜಂಬೆತೋಟ- 15 ಲಕ್ಷ ರೂ.
ನರಿಂಗಾನ ಗ್ರಾಮದ ನರಿಂಗಾನ ಶಾಲಾ ಸಂಪರ್ಕಕ್ಕೆ ಕೊರಗಟ್ಟೆ- 15 ಲಕ್ಷ ರೂ.
ನರಿಂಗಾನ ಗ್ರಾಮದ ನರಿಂಗಾನ ಶಾಲಾ ಸಂಪರ್ಕಕ್ಕೆ ದೊಡ್ಮನೆ ಹಳ್ಳ- 5.75 ಲಕ್ಷ ರೂ.
ಫಜೀರು ಗ್ರಾಮದ ಫಜೀರು ಶಾಲಾ ಸಂಪರ್ಕಕ್ಕೆ ಪಾದಕೋಡಿ- 5.75 ಲಕ್ಷ ರೂ.

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next