Advertisement
ಶನಿವಾರ ಮಧ್ಯಾಹ್ನದವರೆಗಿನ ಅಂಕಗ ಳಂತೆ ಕಲ್ಲಿಕೋಟೆ ಜಿಲ್ಲೆ ಮುನ್ನಡೆ ಯಲ್ಲಿದೆ. ಕಣ್ಣೂರು ಹಾಗು ಪಾಲಾ^ಟ್ ಜಿಲ್ಲೆ ನಿಕಟ ಸ್ಪರ್ಧೆ ಯನ್ನು ನೀಡುತ್ತಿದೆ. ಕಲ್ಲಿಕೋಟೆ ಜಿಲ್ಲೆ 625 ಅಂಕಗಳಿಂದ ಮುನ್ನಡೆಯನ್ನು ಕಾಯ್ದು ಕೊಂಡಿದ್ದರೆ, ಕಣ್ಣೂರು-617, ಪಾಲಾ^ಟ್ – 614 ಅಂಕಗಳಿಂದ ತೀವ್ರ ಸ್ಪರ್ಧೆ ನೀಡುತ್ತಿದೆ.
Related Articles
1991 ರಲ್ಲಿ ಯಕ್ಷಗಾನ ಕಲೆಯನ್ನು ಮೊಟ್ಟಮೊದಲಾಗಿ ಶಾಲಾ ಕಲೋತ್ಸವದಲ್ಲಿ ಏರ್ಪಡಿಸಲಾಗಿತ್ತು. ಅಂದು ಕಾಸರಗೋಡಿನಲ್ಲಿ ನಡೆದ ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಸೇರ್ಪಡೆ ನಡೆದಿತ್ತು. ಈ ಬಗ್ಗೆ ಶಿಕ್ಷಣ ನಿರ್ದೇಶಕರು 1990 ಡಿಸೆಂಬರ್ 26 ರಂದು ಆದೇಶ ಹೊರಡಿಸಿದ್ದರು. ಅಂದಿನಿಂದ ಇಂದಿನ ವರೆಗೂ ರಾಜ್ಯ ಶಾಲಾ ಕಲೋತ್ಸವಗಳಲ್ಲಿ ಯಕ್ಷಗಾನದಲ್ಲಿ ಕಾಸರಗೋಡು ಜಿಲ್ಲೆಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
Advertisement
ಧೂಳುಮಯ ವಿವಿಧ ಸ್ಪರ್ಧೆಗಳು ವೇದಿಕೆ ಮೇಲೆ ಪ್ರಸ್ತುತಗೊಳ್ಳುತ್ತಿರುವಾಗ ವೇದಿಕೆಯ ಹೊರಗೆ ಧೂಳಿನ ಸಮಸ್ಯೆಗೆ ಕಾರಣವಾಗುತ್ತಿತ್ತು. ಧೂಳಿನ ಸಮಸ್ಯೆಯನ್ನು ಪರಿಹರಿಸಲು ಅಗ್ನಿಶಾಮಕ ದಳ ಪದೇ ಪದೇ ನೀರನ್ನು ಸಿಂಪಡಿಸುತ್ತಿತ್ತು. ಸಾರಿಗೆ ಸೌಕರ್ಯದ ತೊಂದರೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವೇದಿಕೆಗಳ ಅಂತರ ದೂರವಿದ್ದ ಕಾರಣದಿಂದ ಎಲ್ಲಾ ವೇದಿಕೆಗಳಿಗೆ ತೆರಳಲು ಬಹಳಷ್ಟು ತ್ರಾಸ ಅನುಭವಿಸುವಂತಾಗಿದೆ ಎಂದು ಕಲಾಸ್ವಾದಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಲೋತ್ಸವ: ಚಿತ್ರ ರಚನೆ
ಹೊಸ ಬಸ್ಸು ತಂಗುದಾಣದ ಪರಿಸರದಲ್ಲಿ ವಸ್ತು ಪ್ರದರ್ಶನಕ್ಕೆ ಮೆರಗು ನೀಡಿದ ಪ್ರಸಿದ್ಧ ಚಿತ್ರ ಕಲಾ ಅಧ್ಯಾಪಕರ ಚಿತ್ರ ರಚನೆ ಮತ್ತು ಪ್ರದರ್ಶನ ಜನಮನ ಸೂರೆಗೊಂಡಿತು. ಖ್ಯಾತ ಶಿಲ್ಪಿಯೂ, ಚಿತ್ರಕಾರರಾದ ರವಿ ಪಿಲಿಕೋಡ್ ಉದ್ಘಾಟನಾ ಸಮಾರಂಭ ವನ್ನು ನೆರವೇರಿಸಿದರು. ಮಂಜೇಶ್ವರ ಎಸ್.ಎ.ಟಿ. ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ನೇತೃತ್ವ ದಲ್ಲಿ ನಡೆದ ಚಿತ್ರ ರಚನೆಗೆ ಡಯಟ್ ಸೀನಿಯರ್ ಲೆಚ್ಚರರ್ ಅನಿಲ್ ಮಣಿಯರ, ಜಿ.ವೀರೇಶ್ವರ್ ಭಟ್ ಶುಭಕೋರಿದರು. ಕಲಾ ಅಧ್ಯಾಪಕರಾದ ಪ್ರಮೋದ್ ಅಡುತಿಲ, ದಿವಾಕರ, ಚಿತ್ರನ್ ಕುಂಞಮಂಗಲ, ಅಶೋಕ್ ಮೊದಲಾದವರು ಭಾಗವಹಿಸಿದ್ದರು.