Advertisement
ಕೋವಿಡ್ ಮೊದಲ ಅಲೆ ಪ್ರಾರಂಭಗೊಂಡಾಗ ಶಾಲಾಕಾಲೇಜು ಮುಚ್ಚಲಾಗಿತ್ತು.ಜಿಲ್ಲೆಯಲ್ಲಿ ಶಾಲೆಗಳು ಬಂದ್ ಆಗಿದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ತಲೆನೋವಾಗಿ ಪರಿಣಮಿಸಿತ್ತು. ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಶಾಲಾ ಕಾಲೇಜುಗಳಿಗೆ ಸ್ಯಾನಿ ಟೈಸ್ ಮಾಡಿದ್ದು, ಎಲ್ಲ ಕೊಠಡಿಗಳನ್ನು ಸ್ವಚ್ಛ ಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಕೋವಿಡ್ ಆರ್ಭಟ ಇಳಿದ ಬಳಿಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾ ಗಿದ್ದಾರೆ. ದಾಖಲಾತಿಗೆ ಅನುಗುಣವಾಗಿ ಶಿಕ್ಷಕರ ವ್ಯವಸ್ಥೆ ಮಾಡುವುದು ಅತ್ಯವಶ್ಯಕವಾಗಿದೆ. ಆದರೇ ಶಿಕ್ಷಕರಕೊರತೆಯಿದೆ. ಜೊತೆಗೆ ಗ್ರೂಪ್ ಡಿ-ನೌಕರರು ಕೆಲ ಶಾಲೆಗಳಲ್ಲಿ ಇಲ್ಲದೆ ಶಾಲೆ ಸ್ವಚ್ಛತೆ ಸಮಸ್ಯೆಎದುರಾಗಿದೆ.
Related Articles
9ನೇ ತರಗತಿ ಮತ್ತು10ನೇ ತರಗತಿಗಳಿಗೆ 30,636 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 9ನೇ ತರಗತಿಗೆ 15,499 ವಿದ್ಯಾರ್ಥಿ ಗಳು ನೋಂದಣೆಯಾಗಿದೆ. ಎಸ್ಸೆಸ್ಸೆಲ್ಸಿಗೆ 15,464 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಇನ್ನು ಪ್ರಥಮ ಪಿಯುಸಿಗೆ ದಾಖಲಾತಿ ಪ್ರಗತಿ ಯಲ್ಲಿದ್ದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಾಳಿ ಮಾದರಿಯಲ್ಲಿ ತರಗತಿ ನಡೆಸಲು ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಸಕಲ ರೀತಿಯ ಸಿದ್ಧತೆಕೈಗೊಂಡಿದೆ.
Advertisement
ಮಕ್ಕಳಿಗೆ ಬಸ್ ಸಮಸ್ಯೆಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳು ಶಿಕ್ಷಣಕ್ಕೆ ನಗರವನ್ನು ಅವಲಂಬಿಸಿದ್ದಾರೆ.ಕೋವಿಡ್ ಹಿನ್ನೆಲೆ ಗ್ರಾಮೀಣ ಭಾಗದಲ್ಲಿ ಸ್ಥಗಿತಗೊಂಡಿದ್ದ ಬಸ್ ಸೇವೆ ಪ್ರಾರಂಭವಾಗಿಲ್ಲ. ಪದವಿಪೂರ್ವ ತರಗತಿಗಳು ಈಗಾಗಲೇ ಪ್ರಾರಂಭವಾಗಿದ್ದು ಸರ್ಕಾರಿ ಬಸ್‌ಗಳಲ್ಲಿ ಪಾಸ್ ಪಡೆದು ಓಡಾಡುತ್ತಿದ್ದ
ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಎದುರಾಗಿದೆ.9 ರಿಂದ12ನೇ ತರಗತಿಗಳು ಪ್ರಾರಂಭವಾಗಲಿದ್ದು, ಗ್ರಾಂ.ಸಾರಿಗೆ ಸೌಲಭ್ಯಕ್ಕಾಗಿ ಸ್ಥಳೀಯರು
ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ 2ನೇ ಅಲೆ ಬಳಿಕ ಆ.23ರಿಂದ ಆರಂಭವಾಗುತ್ತಿರುವ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ.
– ಎಂಟಿಬಿ ನಾಗರಾಜ್,
ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲೆಯ ಎಲ್ಲಾ ಶಾಲೆಗಳ ತರಗತಿಗಳಿಗೆ ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯ, ಆತಂಕವಿಲ್ಲದೆ ತರಗತಿಗಳಿಗೆ ಹಾಜರಾಗಬೇಕು. ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
– ಗಂಗಮಾರೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ
ಜಿಲ್ಲಾ ಉಪನಿರ್ದೇಶಕ ಈಗಾಗಲೇ ಶಿಕ್ಷಣ ಇಲಾಖೆ ಮುಖಾಂತರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿಕೊಂಡು,
ಮುಂಜಾಗ್ರತಾ ಕ್ರಮಕೈಗೊಂಡು ಶಾಲಾ-ಕಾಲೇಜುಗಳನ್ನುಆರಂಭಿಸಲಾಗಿದೆ.
– ಕೆ. ಶ್ರೀನಿವಾಸ್, ಜಿಲ್ಲಾಧಿಕಾರಿ ಆ.23ರಿಂದ ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ಎಲ್ಲಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿಸಲಾಗಿದೆ.ಕೋವಿಡ್ ಮಾರಿ, ಮುನ್ನೆಚ್ಚರಿಕೆಕ್ರಮ ಹೇಗೆ ಕೈಗೊಳ್ಳಬೇಕು ಎಂಬುವುದರ ಬಗ್ಗೆ ಅರಿವು ಮೂಡಿಸಬೇಕು.
-ಬಾಲಾಜಿ,ಉಪನಿರ್ದೇಶಕರು,
ಪಿಯು ಇಲಾಖೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಕಳೆದ 2 ವರ್ಷಗಳಿಂದ ಮಕ್ಕಳು ಮನೆಯಲ್ಲಿಯೇ ಇದ್ದು ಮಂಕಾಗಿದ್ದಾರೆ. ಶಿಕ್ಷಣದೊಂದಿಗೆ ಪಠ್ಯೇತರ ವಿಷಯಗಳ ಕಲಿಕೆ, ತರಗತಿಗಳ ಪ್ರಾರಂಭ ಸಹಕಾರಿಯಾಗಲಿದೆ.
-ಶ್ರೀನಿವಾಸ್, ಪೋಷಕರ ಕೋವಿಡ್ ಬಂದನಂತರ ಆನ್‌ಲೈನ್ ಶಿಕ್ಷಣದಲ್ಲಿ ಸರಿಯಾಗಿ ಕಲಿಯಲುಕಷ್ಟವಾಗುತ್ತಿತ್ತು. ಈಗ ಶಾಲೆ ಆರಂಭವಾಗುತ್ತಿರುವುದು ಸಂತಸ ತಂದಿದೆ.
– ವಿನಯ್, ಕಾರ್ಮಲ್ ಆಂಗ್ಲ ಶಾಲೆಯ 9ನೇ ತರಗತಿ ವಿದ್ಯಾರ್ಥಿ – ಎಸ್.ಮಹೇಶ್