ಮಾಡಲು ಮುಂದಾಗಿದ್ದು ಆ.23ರ ಸೋಮವಾರದಿಂದ 9 ಮತ್ತು 10ನೇ ತರಗತಿಗಳನ್ನು ಶೈಕ್ಷಣಿಕ ಜಿಲ್ಲೆಯೂ ಪ್ರಾರಂಭ ಮಾಡಲು ಸಿದ್ಧತೆ ನಡೆಸಿದ್ದು, ಪೋಷಕರ ಅನುಮತಿ ಪತ್ರದೊಂದಿಗೆ ಮಕ್ಕಳು ಶಾಲೆಗೆ ಹಾಜರಾಗಬೇಕು. ಮಕ್ಕಳು ಶಾಲೆಗೆ ಬರುವುದು ಕಡ್ಡಾಯವಿಲ್ಲ. ಆನ್‌ಲೈನ್,ಆಫ್ಲೈನ್ ಎರಡರಲ್ಲೂ ಪಾಠ ಮಾಡಲು ಶಿಕ್ಷಣಇಲಾಖೆ ತಯಾರಿ ನಡೆಸಿದೆ.
Advertisement
ತುಮಕೂರು: ಸರ್ಕಾರದ ಮಾರ್ಗಸೂಚಿ ಅನ್ವಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಆಗಸ್ಟ್ 23ರಿಂದ ಭೌತಿಕ ತರಗತಿ ಪ್ರಾರಂಭವಾಗಲಿರುವ ಹಿನ್ನೆಲೆ ಶೈಕ್ಷಣಿಕ ಜಿಲ್ಲೆಯಲ್ಲಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
Related Articles
Advertisement
ವ್ಯಾಕ್ಸಿನ್ ಕೊಡಿಸಲು ಕ್ರಮ: ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಬೇಕು. ಶಾಲೆಯ ಅಡುಗೆಯವರನ್ನು ಕರೆಸಿ ಮಕ್ಕಳಿಗೆ ಬಿಸಿ ನೀರು ಕಾಯಿಸಿಕೊಡಬೇಕು. ಮಕ್ಕಳು ಊಟ ಮತ್ತು ಲಘು ಉಪಾಹಾರ ಬಿಸಿ ನೀರನ್ನು ಮನೆಯಿಂದಲೇ ತರಬೇಕು. ಕೋವಿಡ್ ಇರುವ ಮಕ್ಕಳ ಕುಟುಂಬಕ್ಕೆ ವ್ಯಾಕ್ಸಿನ್ ಕೊಡಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಶೇ. 95ರಷ್ಟು ಶಿಕ್ಷಕರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 11 ಸಾವಿರ ಶಿಕ್ಷಕರು ಇದ್ದು, ಅದರಲ್ಲಿ 1,100 ಮಂದಿ ಶಿಕ್ಷಕರಿಗೆ ವ್ಯಾಕ್ಸಿನ್ ಇನ್ನೂ ಆಗಿಲ್ಲ ಎನ್ನುವ ಮಾಹಿತಿ ಇದೆ. ಅವರು ತಕ್ಷಣ ವ್ಯಾಕ್ಸಿನ್ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ತಿಳಿಸಿದ್ದಾರೆ.
ಪಾಸಿಟಿವಿಟಿದರ ಒಂದಕ್ಕಿಂತ ಕಡಿಮೆ: ಜಿಲ್ಲೆಯಲ್ಲಿ 2 ಲಕ್ಷ 30ಸಾವಿರ ವಿದ್ಯಾರ್ಥಿಗಳು ಇದ್ದು, ಈಗ ಸರ್ಕಾರ 9 ಮತ್ತು 10 ನೇ ತರಗತಿ ಶಾಲೆ ಪ್ರಾರಂಭ ಮಾಡಲು ಸಿದ್ಧತೆ ನಡೆಸಿದೆ. ಮುಂದೆ ಕೋವಿಡ್ ಪ್ರಮಾಣ ನೋಡಿಕೊಂಡು ಸರ್ಕಾರ ಇತರೆ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಲಿದೆ. ಈಗಿನ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ನಮ್ಮಲ್ಲಿ ಕೋವಿಡ್ ಪಾಸಿಟಿವಿಟಿದರ ಒಂದಕ್ಕಿಂತ ಕಡಿಮೆ ಇದೆ. ಆದರೂ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೂ, ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಬರಬೇಕು ಎಂದು ಒತ್ತಾಯ ಇಲ್ಲ, ಆಫ್ಲೈನ್, ಆನ್‌ಲೈನ್ ಎರಡರಲ್ಲಿಯೂ ಇರುತ್ತದೆ. ಶಾಲೆಗಳನ್ನು ಆರಂಭ ಮಾಡಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಶಾಲೆಗಳಿಗೆ ಎಷ್ಟು ಮಕ್ಕಳು ಬರುತ್ತಾರೆ ಎನ್ನುವುದು ಕುತೂಹಲ ಮೂಡಿದೆ.
ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆ ಪ್ರಾರಂಭಿಸಲು ಕ್ರಮಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವುದರಿಂದ ತಜ್ಞರ ಸಲಹೆ ಮೇರೆಗೆ ಆ. 23ರ ನಂತರ ಪ್ರೌಢಶಾಲೆಗಳು ಆರಂಭಗೊಳ್ಳಲಿದ್ದು, ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಡಿಪಿಐ ಹಾಗೂ ಬಿಇಒಗಳು ಕೋವಿಡ್ ಮಾರ್ಗಸೂಚಿನ್ವಯ ಶಾಲೆ ಪ್ರಾರಂಭಿಸಲು ಕ್ರಮ
ವಹಿಸುವರು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ರಾಜ್ಯದಲ್ಲಿ ಈ ಬಾರಿ 8.75 ಲಕ್ಷ ಮಕ್ಕಳು ಯಾವುದೇ ಕೋವಿಡ್ ಸೋಂಕಿಗೆ ಒಳಗಾಗದೇ ಎಸ್‌ಎಸ್ ಎಲ್‌ಸಿ ಪರೀಕ್ಷೆ ಬರೆದಿದ್ದು, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಸಂಭಾವ್ಯ ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ದೃಢಪಟ್ಟರೆ ಅಂತಹ ಶಾಲೆಯನ್ನು ಒಂದು ವಾರಗಳ ಕಾಲಮುಚ್ಚಿ ಸ್ಯಾನಿಟೈಸ್ ಮಾಡಿದ ನಂತರ ಪ್ರಾರಂಭಿಸಲಾಗುವುದು ಎಂದರು. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 9 ಮತ್ತು 10 ನೇ ತರಗತಿಗಳನ್ನು ಪ್ರಾರಂಭ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೇವೆ. ಪ್ರತಿ ಶಾಲೆಗಳಲ್ಲಿಯೂ ಕೋವಿಡ್ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಲು ಸೂಚಿಸಲಾಗಿದೆ. ಮಕ್ಕಳು ಶಾಲೆಗೆ ಬರಬೇಕು ಎನ್ನುವ ಕಡ್ಡಾಯ ಹೊಂದಿಲ್ಲ. ಆನ್‌ಲೈನ್ ಮೂಲಕವೂ ಮಕ್ಕಳಿಗೆ ಶಿಕ್ಷಣ ಕೊಡಲಾಗುವುದು.
– ಸಿ.ನಂಜಯ್ಯ, ಉಪನಿರ್ದೇಶಕ,
ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದಿದೆ. ಪಾಸಿಟಿವಿಟಿದರ ಒಂದಕ್ಕಿಂತ ಕಡಿಮೆಬಂದಿದೆ. ಈಗಿನ ವಾತಾವರಣದಲ್ಲಿ ಅಗತ್ಯ ಕೋವಿಡ್ ಮಾರ್ಗಸೂಚಿ ಅನುಸರಿಸಿ ಶಾಲೆ ಆರಂಭಿಸಲು ತಜ್ಞರು ನೀಡಿರುವ ಸಲಹೆಯಂತೆ ಶಾಲೆಗಳು ಆರಂಭವಾಗುತ್ತಿವೆ.
– ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ -ಚಿ.ನಿ.ಪುರುಷೋತ್ತಮ್