Advertisement

ಕಠಿನ ಪರಿಸ್ಥಿತಿಯಲ್ಲಿ ಶಾಲಾ ಬಸ್‌ ಮಾಲಕರು, ಚಾಲಕರು

12:22 PM Apr 13, 2020 | mahesh |

ಮುಂಬಯಿ: ಶಾಲಾ ಬಸ್‌ಗಳಲ್ಲಿ ಕೆಲಸ ಮಾಡುವ 9,000ಕ್ಕೂ ಹೆಚ್ಚು ಚಾಲಕರು, 4,000 ಕ್ಲೀನರ್‌ಗಳು ಮತ್ತು ಸಹಾಯಕರು, 7,000 ಮಹಿಳಾ ಪರಿಚಾರಕರು ಮತ್ತು 1,000 ಬಸ್‌ ಮೇಲ್ವಿಚಾರಕರು ಲಾಕ್‌ ಡೌನ್‌ ನಿಂದ ಕಠಿನ ಸಮಯವನ್ನು ಎದುರಿಸುತ್ತಿದ್ದಾರೆ.

Advertisement

ಇಡೀ ದೇಶವು ಬೀಗಮುದ್ರೆಗೆ ಒಳಪಟ್ಟಿದೆ ಮತ್ತು ಯಾವುದೇ ಕೆಲಸ ಲಭ್ಯವಿಲ್ಲದ ಕಾರಣ ಅವರೆಲ್ಲರೂ ಈಗಾಗಲೇ ಶೇಕಡಾ 50 ರಷ್ಟು ವೇತನ ಕಡಿತವನ್ನು ಎದುರಿಸಿದ್ದು ಮಾತ್ರವಲ್ಲದೆ ಮುಂದಿನ ತಿಂಗಳುಗಳಿಂದ ಅವರಲ್ಲಿ ಯಾರಿಗೂ ಸಂಬಳ ಸಿಗುವುದಿಲ್ಲ ಎನ್ನಲಾಗಿದೆ.

ಅವರ ಕೆಲಸದ ಬಗ್ಗೆ ಅನಿಶ್ಚಿತತೆ ಹೆಚ್ಚಾಗುತ್ತಿರುವುದರಿಂದ ಮತ್ತು ಅವರಲ್ಲಿ ಹೆಚ್ಚಿನವರು ವಲಸಿಗರಾಗಿರುವುದರಿಂದ, ಶಾಲಾ ಬಸ್‌ ನೌಕರರು ಪರಿಸ್ಥಿತಿ ಸಾಮಾನ್ಯವಾಗುವವರೆಗೆ ತಮ್ಮ ಗ್ರಾಮಗಳಿಗೆ ಮರಳಲು ನಿರ್ಧರಿಸಿ ¨ªಾರೆ. ಅವರು ತಮ್ಮ ಹಳ್ಳಿಗಳಿಗೆ ಹಿಂದಿರುಗುತ್ತಿರು ವುದರಿಂದ ಶಾಲೆಗಳು ಮತ್ತೆ ತೆರೆದಾಗ ಅವರನ್ನು ಮತ್ತೆ ಒಟ್ಟಿಗೆ ಸೇರಿಸುವುದು ಕಷ್ಟ ಎಂದು ಶಾಲಾ ಬಸ್‌ ಮಾಲಕರ ಸಂಘ (ಎಸ್‌ಬಿಒಎ) ಆತಂಕ ವ್ಯಕ್ತಪಡಿಸಿದೆ.

ಆದ್ದರಿಂದ ಎಸ್‌ಬಿಒಎ ರಾಜ್ಯ ಸರ್ಕಾರಕ್ಕೆ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿ ಪರಿಹಾರ ಕಂಡು ಕೊಳ್ಳುವ ಆಶಯದೊಂದಿಗೆ ಪತ್ರ ಬರೆದಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು, ನಗರಾದ್ಯಂತ ಶಾಲೆಗಳು ತಮ್ಮ ನಿಗದಿತ ದಿನಾಂಕಗಳಲ್ಲಿ ಮತ್ತೆ ತೆರೆಯಬಹುದು. ಆನ್‌ಲೈನ್‌ ವ್ಯವಸ್ಥೆಗಳೊಂದಿಗೆ ಶೈಕ್ಷಣಿಕ ವರ್ಷದಲ್ಲಿ ಯಾವುದೇ ರೀತಿಯ ವಿರಾಮವಿಲ್ಲ ಎಂದು ನಾವು ಅರಿತುಕೊಂಡಿದ್ದೆವೆ. ಆದಾಗ್ಯೂ, ಇದು ಶಾಲಾ ಬಸ್‌ ಕ್ಷೇತ್ರದ ಮೇಲೆ ಹೆಚ್ಚಾಗಿ ಪರಿಣಾಮ ಬೀರಿದೆ.

ಈ ಕಠಿನ ಸಮಯದಲ್ಲಿ ಉದ್ಯೋಗದಾತರು ತಮ್ಮ ಸಿಬಂದಿಗೆ ಪೂರ್ಣ ಸಂಬಳ ನೀಡುವುದನ್ನು ಮುಂದುವರಿಸಬೇಕೆಂದು ಸರಕಾರ ಸೂಚಿಸಿದ್ದರೂ, ಶಾಲಾ ಬಸ್‌ ಮಾಲಕರು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಗರಾದ್ಯಂತ ಶಾಲೆಗಳು ಮುಚ್ಚಲ್ಪಟ್ಟವು ಮತ್ತು ಬಸ್ಸುಗಳು ಸ್ಥಗಿತಗೊಂಡಿದ್ದರಿಂದ, ಇಡೀ ಶಾಲಾ ಬಸ್‌ ವ್ಯವಹಾರವು ಸ್ಥಗಿತಗೊಂಡಿದೆ.

Advertisement

ಎಸ್‌ಬಿಒಎ ಅಧ್ಯಕ್ಷ ಅನಿಲ್‌ ಗರ್ಗ ಮಾತನಾಡಿ ಸಾಮಾನ್ಯ ಅಭ್ಯಾಸದ ಪ್ರಕಾರ, ಎಪ್ರಿಲ್‌ ತಿಂಗಳವರೆಗೆ ಪೋಷಕರು ಶಾಲಾ-ಬಸ್‌ ಸೇವೆಗಳಿಗೆ ಶುಲ್ಕವನ್ನು ಪಾವತಿಸುತ್ತಾರೆ. ಸಿಬಂದಿಗಳ ಆದ್ಯತೆಗೆ ಅನುಗುಣವಾಗಿ ನಾವು ಸಂಬಳವನ್ನು ನೀಡುತ್ತೇವೆ. ನಂತರ ಮೇ ತಿಂಗಳಲ್ಲಿ ಶಾಲೆಗಳಿಗೆ ರಜೆಯ ಸಮಯವಾಗಿದೆ. ಜೂನ್‌ನಿಂದ ಮತ್ತೆ ಹೊಸ ಪಾವತಿ ಚಕ್ರ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಮಾರ್ಚ್‌ ನಿಂದ ಯಾವುದೇ ಶುಲ್ಕ-ಪಾವತಿ ಇಲ್ಲ. ಏಕೆಂದರೆ ನಿಯಮಿತ ಶಾಲಾ ಶಿಕ್ಷಣವಿಲ್ಲ. ಇದಲ್ಲದೆ, ಅವರಲ್ಲಿ ಹೆಚ್ಚಿನವರು ವಲಸಿಗರು. ಕೈಯಲ್ಲಿ ಸರಿಯಾದ ಕೆಲಸವಿಲ್ಲದೆ ಅವರು ತಮ್ಮ ಊರುಗಳಿಗೆ ಹಿಂದಿ ರುಗಲು ಪ್ರಯತ್ನಿಸುತ್ತಿದ್ದಾರೆ. ಶಾಲೆಗಳು ಪುನಃ ತೆರೆದಾಗ ಇದು ಮಾನವಶಕ್ತಿಯ ದೊಡ್ಡ ಕೊರತೆಗೆ ಕಾರಣವಾಗಲಿದೆ, ಏಕೆಂದರೆ ಬಸ್ಸುಗಳು ಅವುಗಳ ಸಂಪೂರ್ಣ ಸಾಮರ್ಥ್ಯದಲ್ಲಿ ಚಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next