Advertisement

ಕಲ್ಯಾ ಶಾಲೆ ಕಟ್ಟಡ ಕುಸಿತ

10:41 AM Aug 13, 2018 | Team Udayavani |

ಬೆಳ್ಮಣ್‌: ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕಾರ್ಕಳ ತಾಲೂಕಿನ ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ.

Advertisement

ಹಳೆಯ ಕಟ್ಟಡವಾಗಿರುವ ಕಾರಣ ಇಲ್ಲಿ ಕೆಲವೊಮ್ಮೆ ಮಾತ್ರ ಪಾಠ ಪ್ರವಚನ ನಡೆಯುತ್ತಿತ್ತು. ಉಳಿದಂತೆ ಸಭಾಂಗಣವಾಗಿ ಉಪಯೋಗಿಸುತ್ತಿದ್ದರು. ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ. ಕಟ್ಟಡ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ಮಳೆ ನೀರು ಬಿದ್ದು ಎರಡು ತರಗತಿ ಕೋಣೆಗಳ ಒಂದು ಭಾಗದ ಗೋಡೆಯೂ ಕುಸಿದಿದೆ. ಮಳೆ ಮುಂದುವರಿದರೆ ಕಟ್ಟಡ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಆಚಾರ್‌ ತಿಳಿಸಿದ್ದಾರೆ. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್‌ ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರತಿಮಾ ಹಾಗೂ ಮುಖ್ಯ ಶಿಕ್ಷಕಿ ರವಿವಾರ ಶಾಲೆಯಲ್ಲೇ  ಇದ್ದು ಆಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next