ಆಲೂರು: ತಂಬಾಕು, ಮದ್ಯ ಮಾರಾಟ ಹಾಗೂ ಸೇವನೆ ಶಾಲೆಯಿಂದ ದೂರವಿರಬೇಕು ಎಂದು ಸರ್ಕಾರ ನಿಯಮ ರೂಪಿಸಿದ್ದರೂ ಈ ಶಾಲೆಯ
ಆವರಣದಲ್ಲಿ ಮಾತ್ರ ನಿತ್ಯ ಮದ್ಯದ ಬಾಟಲ್, ಸಿಗರೇಟ್ ತುಂಡುಗಳು ಕಾಣಿಸುತ್ತಿವೆ.ಈಮೂಲಕ ಶಾಲಾ ಆವರಣ ಕುಡುಕರ ಅಡ್ಡೆಯಾಗಿ
ಮಾರ್ಪಟ್ಟಿರುವುದಂತೂ ಸುಳ್ಳಲ್ಲ. ತಾಲೂಕಿನ ಕಾಮತಿ ಕೂಡಿಗೆಗೆ ಕೇವಲ ಕೂಗಳತೆ ದೂರದಲ್ಲಿರುವ ಪ್ರೌಢಶಾಲೆ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಆಟದ ಮೈದಾನದಲ್ಲಿ ಮದ್ಯ ಬಾಟಲ್, ಗುಟ್ಕಾ ಪಾಕೆಟ್, ಕುಡಿದು ಬಿಸಾಡಿದ ಖಾಲಿ ಬಾಟಲ್‌ಗಳು ತುಂಬಿ ಹೋಗಿದೆ.
ದುಷ್ಕರ್ಮಿಗಳು ಕೆಲವು ವರ್ಷಗಳಿಂದೀಚೆಗೆ ಇದೇ ಶಾಲೆಯಲ್ಲಿ 3-4 ಬಾರಿ ಶಾಲೆ ಬೀಗ ಮುರಿದು ಮುರಿದು ಶಾಲೆ ಬೀರುವಿನಲ್ಲಿದ್ದ ಸಂಬಂಧಪಟ್ಟ
ದಾಖಲೆಗಳನ್ನು ಕುಡಿದ ಅಮಲಿನಲ್ಲಿ ನಾಶಪಡಿಸಿದ್ದರು.
ಇದನ್ನೂ ಓದಿ:ನದಿ ನೀರು ವಿಚಾರವಾಗಿ ಪರಿಹಾರ ಸಾಧ್ಯವಾಗದಿದ್ದರೆ ಜೆಡಿಎಸ್ ನಿಂದ ಹೋರಾಟ: ದೇವೇಗೌಡ
ಹಳೆ ವಿದ್ಯಾರ್ಥಿಗಳಿಂದ ಮೋಜು ಮಸ್ತಿ: ಇದೇ ಶಾಲೆಯಲ್ಲಿ ಓದಿದ ಕೆಲವು ಹಳೆಯ ವಿದ್ಯಾರ್ಥಿಗಳು ಕೆಲವು ಪುಂಡ ಪೋಕರಿಗಳ ಜತೆ ಸೇರಿ ಶಾಲೆ ಆಟದ ಮೈದಾನವನ್ನು ಮೋಜು ಮಸ್ತಿಗಾಗಿ ಬಳಸಿ ಕೊಳ್ಳುತ್ತಿದ್ದಾರೆ. ಹೀಗಾಗಿ ಶಾಲೆ ಸುರಕ್ಷತೆಗೆ ಕಾಂಪೌಂಡ್ ಹಾಗೂ ಗೇಟ್ ಅಳವಡಿಸಬೇಕು ಎಂದು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನುಒತ್ತಾಯಿಸಿದರು. ಹಾಗೆಯೇ ಇನ್ನಾದರೂ ಈ ಶಾಲೆಗೆ ಭದ್ರತಾ ಸಿಬ್ಬಂದಿ ಯನ್ನು ನಿಯೋಜಿಸಬೇಕು ಎಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ.ಅಲ್ಲದೇ, ರಜಾ ದಿನದಲ್ಲಿ ಬಿಟ್ ಪೊಲೀಸರನ್ನು ನಿಯೋಜಿಸಿ ಎಂದು ಆಗ್ರಹಿಸಿದ್ದಾರೆ.
ಶಾಸಕರ ಅನುದಾನ, ಸ್ಥಳಿಯ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಕಾಂಪೌಂಡ್ ಹಾಗೂ ಗೇಟ್ ನಿರ್ಮಾಣಕ್ಕೆ ಹಿರಿಯ ಅಧಿಕಾರಿ ಗಳು ಅನುಮೋದನೆಗೆಕಳುಹಿಸಿಕೊಡಲಾಗಿದೆ. ಅನುಮೋದನೆ ದೊರೆತ ತಕ್ಷಣ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು.
– ರುದ್ರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆಲೂರು