Advertisement
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿರವಿವಾರ ನಡೆದ 75ನೇ ಸ್ವಾತಂತ್ರೊÂàತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಜಿಲ್ಲೆಯ ಹನುಮನಮಟ್ಟಿ ಕೃಷಿ ಪ್ರಾದೇಶಿಕಕೇಂದ್ರದ ಅಭಿವೃದ್ಧಿಗೆ ಐದು ಕೋಟಿ ರೂ.ಒದಗಿಸಲಾಗಿದೆ.
Related Articles
Advertisement
ಕೋವಿಡ್ ಸಂದರ್ಭದಲ್ಲೂ ಅತಿವೃಷ್ಟಿಗೆ ಹಾನಿಯಾದ1093 ಮನೆಗಳಿಗೆ ಒಟ್ಟಾರೆ 2.54 ಕೋಟಿ ಪರಿಹಾರಪಾವತಿಸಲಾಗಿದೆ. ಅತಿವೃಷ್ಟಿಯಿಂದ 1406.55 ಹೆಕ್ಟೇರ್‌ತೋಟಗಾರಿಕೆ ಬೆಳೆ, 8134.68 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ. ಸರ್ವೇ ಕಾರ್ಯ ಪೂರ್ಣಗೊಂಡನಂತರ ಪರಿಹಾರ ಪಾವತಿಸಲಾಗುವುದು ಎಂದರು.ದೇಶದ ಸ್ವಾತಂತ್ರÂ ಚಳವಳಿ ಹಾಗೂ ಹೋರಾಟಗಾರರತ್ಯಾಗ, ಬಲಿದಾನವನ್ನು ಸ್ಮರಿಸಿದರು. ಸರ್ಕಾರ ದಿಟ್ಟಸ್ವಾತಂತ್ರÂ ಯೋಧ ಸಂಗೊಳ್ಳಿ ರಾಯಣ್ಣ ಜಯಂತಿಆಚರಣೆ ಮಾಡಲು ಘೋಷಣೆ ಮಾಡಿರುವುದು ಸಂತಸತಂದಿದೆ.
ಸ್ವಾತಂತ್ರÂದ ಸಂದರ್ಭದಲ್ಲಿ ನಾವು ಎದುರಿಸಿದಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲುಇಂದು ನಮಗೆ ಸಾಧ್ಯವಾಗಿದೆ. ಬಡತನ, ಅನಕ್ಷರತೆ,ನಿರುದ್ಯೋಗ ಸಮಸ್ಯೆಗಳನ್ನು ಯಶಸ್ವಿಯಾಗಿಎದುರಿಸಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜಿಲ್ಲೆಯಸರ್ವಾಂಗೀಣ ಅಭಿವೃದ್ಧಿ ಮಾಡಲಿದ್ದೇವೆ ಎಂದರು.
ಸನ್ಮಾನ: ಸ್ವಾತಂತ್ರ ಯೋಧ ಮಳ್ಳಪ್ಪ ಸಿದ್ದಪ್ಪ ಕೊಪ್ಪದ,ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಜಿಲ್ಲಾಗೃಹರಕ್ಷಕ ದಳದ ಸಮಾದೇಷ್ಠರಾದ ಪ್ರಭಾಕರಎಸ್.ಮಂಟೂರ, ಪತ್ರಕರ್ತರಾದ ಮಾಲತೇಶಅಂಗೂರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಸ್ನೇಹಾ ಸಿದ್ದಪ್ಪ, ಪಿಯುಸಿಯಲ್ಲಿ ಅತೀ ಹೆಚ್ಚುಅಂಕ ಪಡೆದ ಸುಕನ್ಯಾ ಜಾಧವ ಹಾಗೂ ಕೊರೊನಾವಾರಿಯರ್ಗಳಾದ ಆರೋಗ್ಯ ಇಲಾಖೆ, ಪೊಲೀಸ್,ಗ್ರಾಮೀಣಾಭಿವೃದ್ಧಿ, ಕಂದಾಯ, ಪೌರಕಾರ್ಮಿಕರು,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾಶಿಕ್ಷಕರು ಸೇರಿದಂತೆ 46 ಜನರಿಗೆ ಪುಸ್ತಕ ಹಾಗೂಪ್ರಮಾಣ ಪತ್ರ ನೀಡಿ ಕೃಷಿ ಸಚಿವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಸಕರು ಹಾಗೂ ರಾಜ್ಯಅನುಸೂಚಿತ ಜಾತಿ ಮತ್ತು ಅನುಸೂಚಿತಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ,ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ,ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಶಿವಕುಮಾರಸಂಗೂರ, ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾಪೊಲೀಸ್ ವರಿಷ್ಠಾ ಧಿಕಾರಿ ಹನುಮಂತರಾಯ,ಜಿಪಂ ಸಿಇಒ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿ ಕಾರಿಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ಗಿರೀಶ ಸ್ವಾದಿ, ಇತರೆ ಅಧಿ ಕಾರಿಗಳು, ಗಣ್ಯರುಭಾಗವಹಿಸಿದ್ದರು.