Advertisement

ನೆರೆ ಸಂತ್ರಸ್ತರ ಮನೆ ಪುನರ್‌ ನಿರ್ಮಾಣ ಕಾಮಗಾರಿ ಆದೇಶ ಪತ್ರ ವಿತರಣೆ

10:26 PM Oct 04, 2019 | Sriram |

ಕುಂದಾಪುರ: ಮಳೆಯಿಂದಾಗಿ ಮನೆ, ಮತ್ತಿತರ ಸ್ವತ್ತುಗಳಿಗೆ ಹಾನಿಗೊಳಗಾದ ಬಗ್ಗೆ ಅಧಿಕಾರಿಗಳು, ಸರ್ವೇ ಮಾಡುವ ಇಂಜಿನಿಯರ್‌ಗಳು ಸಮರ್ಪಕ ಮಾಹಿತಿ ಕೊಡಿ.

Advertisement

ಸಂತ್ರಸ್ತರಿಂದ ಕೆಲ ದೂರುಗಳು ಬಂದಿದ್ದು, ಮುಂದೆ ಈ ರೀತಿ ತಾರತಮ್ಯ ಮಾಡಬೇಡಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಹೇಳಿದರು.

ಅವರು ಮಂಗಳವಾರ ತಲ್ಲೂರಿನ ಶೇಷಶಯನ ಸಭಾಭವನದಲ್ಲಿ ನಡೆದ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದಾ ಹಾನಿಗೊಳಗಾದ ಸಂತ್ರಸ್ತರಿಗೆ ಮನೆ ನಿರ್ಮಾಣ, ದುರಸ್ತಿ ಕಾಮಗಾರಿಗೆ ಸರಕಾರದಿಂದ ಸಹಾಯಧನ ಮಂಜೂರಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು.

ನೆರೆ ಪೀಡಿತ ಪ್ರದೇಶಗಳಲ್ಲಿ ತಾಲೂಕು ಹಾಗೂ ಸ್ಥಳೀಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಈ ಬಗ್ಗೆ ಹೆಮ್ಮೆಯಿದೆ. ನೆರೆ ಪರಿಹಾರ ಹಂಚಿಕೆಯಲ್ಲೂ ಇದೇ ರೀತಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ. ಈ ಭಾಗದಲ್ಲಿ 13 ಮನೆಗಳು ಸಂಪೂರ್ಣ ಹಾನಿ, 30 ಮನೆಗಳಿಗೆ ಭಾಗಶಃ ಹಾಗೂ 120 ಮನೆಗಳಿಗೆ ಅಲ್ಪ – ಸ್ವಲ್ಪ ಹಾನಿಯಾಗಿವೆ. ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಹಂತ – ಹಂತವಾಗಿ 5 ಲಕ್ಷ ರೂ. ನೀಡಲಾಗುವುದು ಎಂದರು.

ಸಮಗ್ರ ಅಭಿವೃದ್ಧಿ
ಈಗಾಗಲೇ ತಿಳಿಸಿದಂತೆ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 250 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ 37 ಕೊ.ರೂ. ವೆಚ್ಚದಲ್ಲಿ ನೀರಾವರಿಗೆ, 70 ಕೋ.ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದ ಶಾಸಕರು, ಟೆಂಡರ್‌ ಹಂತದಲ್ಲಿರುವ ಸೌಕೂರು ಏತ ನೀರಾವರಿ ಯೋಜನೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

Advertisement

ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್‌, ತಾ.ಪಂ. ಅಧ್ಯಕ್ಷೆ ಶ್ಯಾಮಲ ಕುಂದರ್‌, ಸದಸ್ಯರಾದ ರಾಜು ದೇವಾಡಿಗ, ಸುರೇಂದ್ರ ಖಾರ್ವಿ, ಉಮೇಶ್‌ ಶೆಟ್ಟಿ ಕಲ್ಗದ್ದೆ, ಕರಣ್‌ ಪೂಜಾರಿ, ಸತೀಶ್‌ ಪೂಜಾರಿ, ತಹಶೀಲ್ದಾರ್‌ ತಿಪ್ಪೇಸ್ವಾಮಿ, ದಲಿತ ಸಂಘಟನೆ ಮುಖಂಡರು ಉದಯ ಕುಮಾರ್‌ ತಲ್ಲೂರು, ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ, 20 ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ನಾಗಭೂಷಣ ಉಡುಪ ಪ್ರಾಸ್ತವಿಕವಾಗಿ ಮಾತನಾಡಿದರು. ತಲ್ಲೂರು ಗ್ರಾಮ ಕರಣಿಕ ರಾಘವೇಂದ್ರ ಡಿ. ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next