Advertisement

ಸ್ಕಿಜೋಫ್ರೇನಿಯಾ ಜಾಗೃತಿ ಅಗತ್ಯ

02:28 PM May 25, 2019 | Team Udayavani |

ಶಿಡ್ಲಘಟ್ಟ: ಮಾನಸಿಕ ಒತ್ತಡದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಮನೋ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ತಿಳಿಸಿದರು.

Advertisement

ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ಅರಿವು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಡ್ಲಘಟ್ಟ ನಗರ ಸಹಿತ ತಾಲೂಕಿನಾದ್ಯಂತ ಮಾನಸಿಕ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ಕುರಿತು ಅರಿವು ಮೂಡಿಸಲು ಮೇ 27ರ ವರೆಗೆ ವಿಶ್ವ ಸ್ಕಿಜೋಫ್ರೇನಿಯಾ ಅರಿವು ಸಪ್ತಾಹ ಮುಂದು ವರಿಯಲಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಮಾನಸಿಕ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲಿದ್ದು, ನಾಗರಿಕರು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಹಕಾರ ನೀಡಬೇಕೆಂದು ಮನ ಮಾಡಿದರು. ಸಾಮಾನ್ಯವಾಗಿ ಕೋಪ, ಉದ್ರೇಕ, ನಗುವುದು, ಸಂಶಯದಿಂದ ನೋಡುವುದು, ಆತ್ಮಹತ್ಯೆ ಮಾಡಿ ಕೊಳ್ಳುವುದು, ಮಾನಸಿಕ ಕಾಲೆಗಳಿಗೆ ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸಿ ನುರಿತ ತಜ್ಞರಿಂದ ಚಿಕಿತ್ಸೆ ನೀಡುವುದು ಜಾರಿಯಲ್ಲಿತ್ತು. ಆದರೆ ಸುಪ್ರೀಂ ಕೋರ್ಟ್‌ ತೀರ್ಮಾನದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ತರಬೇತಿ ನೀಡಲಾಗಿದೆ. ಇದೀಗ ಗ್ರಾಮೀಣ ಪ್ರದೇಶದಲ್ಲಿ ಮಾನಸಿಕ ರೋಗಿಗಳನ್ನು ಗುರುತಿಸಿ ಅವರಿಗೆ ಮಾಸಿಕವಾಗಿ ಔಷಧೋಪಚಾರ ನೀಡುವ ಮೂಲಕ ರೋಗವನ್ನು ಗುಣಪಡಿಸುವ ಕಾರ್ಯ ನಡೆಸಲಾಗುತ್ತದೆ ಎಂದರು. ಡಾ.ತಿಮಮೇಗೌಡ, ಡಾ.ಜಯಕುಮಾರ್‌, ನಗರ ಆರೋಗ್ಯ ಕೇಂದ್ರದ ಡಾ. ಸೋನಾಲಿ, ಆರೋಗ್ಯ ಇಲಾಖೆ ಅಫ್ರೋಜ್‌ ಪಾಷ, ನಂದಿನಿ, ಚೈತ್ರ ಹಾಗೂ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಭಾಗವಹಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next