Advertisement

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

02:16 AM Nov 26, 2024 | Team Udayavani |

ಹೊಸದಿಲ್ಲಿ: ಚುನಾವಣೆ ಸಮೀಪಿಸುತ್ತಿರುವಂತೆಯೇ ದಿಲ್ಲಿಯಲ್ಲಿ ಈಗ ಆಪ್‌ ಸರಕಾರ ಮತ್ತು ಬಿಜೆಪಿ ನಡುವೆ “ವೃದ್ಧಾಪ್ಯ ವೇತನ’ ಪೈಪೋಟಿ ಆರಂಭವಾಗಿದೆ.

Advertisement

ಹಿರಿಯ ನಾಗರಿಕರ ಪಿಂಚಣಿ ಯೋಜನೆಗೆ ಹೊಸದಾಗಿ 80 ಸಾವಿರ ಮಂದಿಯನ್ನು ಸೇರ್ಪಡೆ ಮಾಡಿರುವುದಾಗಿ ಆಪ್‌ ಮುಖ್ಯಸ್ಥ ಕೇಜ್ರಿವಾಲ್‌ ಸೋಮವಾರ ಘೋಷಿಸಿದ್ದು, ಈ ಮೂಲಕ ಪಿಂಚಣಿ ಫ‌ಲಾನುಭವಿಗಳ ಸಂಖ್ಯೆ 5.3 ಲಕ್ಷಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.

ಇದರ ಬೆನ್ನಲ್ಲೇ ಆಪ್‌ಗೆ ತಿರುಗೇಟು ನೀಡಿರುವ ಬಿಜೆಪಿ, ಮುಂದಿನ ವರ್ಷ ಚುನಾವಣೆಯಲ್ಲಿ ನಾವು ಅಧಿಕಾರಕ್ಕೇರಿದರೆ, ಎಲ್ಲ ಹಿರಿಯ ನಾಗರಿಕರಿಗೂ ಪಿಂಚಣಿ ಕವರೇಜ್‌ ನೀಡುತ್ತೇವೆ ಎಂದು ಘೋಷಿಸಿದೆ. ಪ್ರಸ್ತುತ ಆಪ್‌ ಸರಕಾರ, 60-69 ವಯಸ್ಸಿನವರಿಗೆ ಮಾಸಿಕ 2 ಸಾವಿರ ರೂ., 70 ವರ್ಷ ಮೇಲ್ಪಟ್ಟವರಿಗೆ 2,500 ರೂ. ಪಿಂಚಣಿ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next