Advertisement

ಪರಿಶಿಷ್ಟರ ಸಾಲದ ಸಬ್ಸಿಡಿ ಹೆಚ್ಚಳ:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ

10:21 AM Sep 21, 2019 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ಯಮಿಗಳಿಗೆ ಸರಕಾರದಿಂದ ನೀಡುತ್ತಿರುವ ಸಾಲದ ಸಬ್ಸಿಡಿಯನ್ನು ಶೇ. 50ರಿಂದ 75ಕ್ಕೆ ಏರಿಕೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಗುರುವಾರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮತ್ತು ಎಸ್‌ಸಿ- ಎಸ್‌ಟಿ ಉದ್ದಿಮೆದಾರರ ಸಂಘ ಆಯೋಜಿಸಿದ್ದ ಸರಕಾರದ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತ ನಾಡಿದರು. ಕರ್ನಾಟಕ ರಾಜ್ಯ ಹಣಕಾಸು ನಿಗಮ(ಕೆಎಸ್‌ಎಫ್ಸಿ)ದಲ್ಲಿ ಎಸ್‌ ಸಿ-ಎಸ್‌ ಟಿ ಉದ್ಯಮಿಗಳಿಗೆ ಸುಲಭ ವಾಗಿ ಸಾಲ ಸಿಗುವಂತಾಗಬೇಕು. ಎನ್‌ಪಿಎ (ನಾನ್‌ ಪರ್ಫಾರ್ಮಿಂಗ್‌ ಅಸೆಟ್ಸ್‌ ) ಕಾರಣ ನೀಡಿ ಅರ್ಜಿ ಪರಿಗಣಿ ಸದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರಗಿ ಸಲಾಗುವುದು. ಕೈಗಾರಿಕೆ ಸ್ಥಾಪಿಸಲು ಉದ್ದೇಶಿಸಿರುವ ನಿವೇಶನವನ್ನೇ ಅಡಮಾನವಾಗಿ ಪರಿಗಣಿಸಿ ಸಾಲ ಮಂಜೂರು ಮಾಡಲು ಕೆಎಸ್‌ಎಫ್ಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

1 ಕೋಟಿ ರೂ.ಗಳ ಗುತ್ತಿಗೆಯಲ್ಲೂ ಮೀಸಲು
ರಾಜ್ಯದಲ್ಲಿ ಹಾಲಿ ಜಾರಿಯಲ್ಲಿರುವ 50 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳಲ್ಲಿ ಎಸ್‌ಸಿ-ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡುತ್ತಿದ್ದು, ಇದನ್ನು ಒಂದು ಕೋಟಿ ರೂ.ಗೆ ಏರಿಕೆ ಮಾಡುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next