ಮಂಗಳೂರು: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದಿರುವ ಬೆಂದೂರ್ ಸಂತ ಆ್ಯಗ್ನೇಸ್ ಹೆಣ್ಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಾನಿ ರೋಹಿನಾಥ್ ನಗರದ ಹ್ಯಾಟ್‌ಹಿಲ್ ನಿವಾಸಿ ರೋಹಿನಾಥ್ ಪಾದೆ ಹಾಗೂ ಬಬಿತಾ ದಂಪತಿ ಪುತ್ರಿ. ಜಯಾನಿ ಅವರ ಅಕ್ಕ ಶಿವಾನಿ ನಿಟ್ಟೆಯಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದಾರೆ.
ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿರುವುದಕ್ಕೆ ಖುಷಿಯಾಗಿದೆ. ಮುಂದೆ ಪ.ಪೂ. ಶಿಕ್ಷಣ ಪಡೆಯಲು ಈಗಾಗಲೇ ಸಂತ ಅಲೋಶಿಯಸ್ ಕಾಲೇಜಿಗೆ ದಾಖಲಾಗಿದ್ದೇನೆ. ವೈದ್ಯೆಯಾಗಬೇಕೆಂಬ ಗುರಿ ಇದೆ. ನಿಗದಿತ ವೇಳಾಪಟ್ಟಿ ಹಾಗೂ ಕ್ರಮಬದ್ಧ ಓದಿನಿಂದ ಇಷ್ಟು ಅಂಕಗಳು ಬಂದಿದೆ ಎಂದಿದ್ದಾರೆ.
Advertisement
ಬೆಳಗ್ಗೆ 6 ಗಂಟೆಯಿಂದಲೇ ಟ್ಯೂಷನ್‌ಗೆ ಹೋಗುತ್ತಿದ್ದೆ. ತಡರಾತ್ರಿ 12 ಗಂಟೆ ವರೆಗೂ ಓದುತ್ತಿದ್ದೆ. ನಾವು ಆತ್ಮವಿಶ್ವಾಸದಿಂದ ಓದಿದಾಗ ಉತ್ತಮ ಅಂಕ ಪಡೆಯಲು ಸಾಧ್ಯ. ಪರೀಕ್ಷಾ ಸಮಯ ಮಾತ್ರವಲ್ಲದೆ ಪ್ರತಿದಿನ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನನ್ನ ಓದಿಗೆ ಮನೆ ಹಾಗೂ ಶಾಲೆಯಲ್ಲಿ ಉತ್ತಮ ಬೆಂಬಲ ಸಿಕ್ಕಿದೆ. ಹೀಗಾಗಿಯೇ ಇಷ್ಟು ಅಂಕಗಳು ಬಂದಿವೆ.