Advertisement
ಕಟ್ಟಡ ಶಿಥಿಲಪರಿಶಿಷ್ಟ ವರ್ಗದ ಬಡ ಮಕ್ಕಳು ಕಲಿಯುವ ಈ ಶಾಲೆಯಲ್ಲಿ ಉತ್ತಮ ಮೇಲ್ವಿಚಾರಕರು, ನುರಿತ ಶಿಕ್ಷಕರಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳು ಇದ್ದಾರೆ. ಆದರೆ ಶಾಲೆ ಮತ್ತು ವಸತಿ ನಿಲಯ ಕಟ್ಟಡ ಶಿಥಿಲ ಸ್ಥಿತಿಯಲ್ಲಿದೆ. ಆಶ್ರಮ ಶಾಲೆಯ ಕಟ್ಟಡ ಶಿಥಿಲಗೊಂಡು ಹೆಂಚುಗಳು ಧರೆಗುರುಳಲು ಸಿದ್ಧವಾಗಿವೆ. ಕಟ್ಟಡ ಹೊರಗಿನಿಂದ ನೋಡಲು ಚೆನ್ನಾಗಿದ್ದಂತೆ ಕಂಡರೂ ಒಳ ಹೊಕ್ಕು ನೋಡಿದರೆ ಕಟ್ಟಡ ಶಿಥಿಲ ಸ್ಥಿತಿಯಲ್ಲಿರುವುದು ಗೋಚರಿಸುತ್ತದೆ. ಇದರೊಳಗೆ ಮಕ್ಕಳು ಅಭದ್ರತೆಯಲ್ಲಿ ಪಾಠ ಕೇಳುವ ಸ್ಥಿತಿ ಇದೆ.
ಇದುವರೆಗೆ ಶಿಥಿಲ ಕಟ್ಟಡಗಳನ್ನು ಸರಕಾರದ ವಿವಿಧ ಅನುದಾನಗಳಲ್ಲಿ ದುರಸ್ತಿಗೊಳಿಸುತ್ತಾ ಬರಲಾಗಿದೆ. ಅಡುಗೆ ಕೊಠಡಿ ನಿರ್ಮಾಣಕ್ಕೆ 41 ಲಕ್ಷ ರೂ. ಅನುದಾನ ಹಾಗೂ 9.5 ಲಕ್ಷ ರೂ. ಅನುದಾನ ದುರಸ್ತಿಗಾಗಿ ಈಗಾಗಲೇ ಒದಗಿ ಬಂದಿದೆ. ಆದರೆ ಆಶ್ರಮ ಶಾಲೆಯ ಎಲ್ಲ ಮೂಲ ಸೌಕರ್ಯ ಈಡೇರಿಕೆಗೆ ದೊಡ್ಡ ಮೊತ್ತದ ಅನುದಾನದ ಆವಶ್ಯಕತೆಯಿದೆ. ನೂತನ ಶಾಲೆ ಕಟ್ಟಡ, ಸುಸಜ್ಜಿತ ವಸತಿನಿಲಯ, ರಂಗಮಂದಿರ, ಕ್ರೀಡಾಂಗಣ, ಶೌಚಾಲಯ ಈ ಎಲ್ಲ ಮೂಲ ಸೌಕರ್ಯಗಳಿಗಾಗಿ 4.5 ಕೋಟಿ ರೂ. ಅಗತ್ಯವಿದೆ. ಇವುಗಳ ಬೇಡಿಕೆಗೆ ಅಂದಾಜು ಪಟ್ಟಿಯ ಪ್ರಸ್ತಾವನೆ ಸರಕಾರಕ್ಕೆ ಮಂಜೂರಾತಿಗಾಗಿ ಸಲ್ಲಿಕೆಯಾಗಿದೆ. ಅದಿನ್ನು ಮಂಜೂರುಗೊಂಡಿಲ್ಲ. ಶಾಲೆಗೆ ಸೇರಿದ ಜಾಗದ ದಾಖಲೆ ಪತ್ರಗಳನ್ನು ಸಮರ್ಪಕಗೊಳಿಸುವ ಕೆಲಸವನ್ನು ಮೇಲ್ವಿಚಾರಕ ನಡೆಸುತ್ತಿದ್ದಾರೆ. ಇರುವ ಸವಲತ್ತುಗಳು
ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶದ ಆಹಾರ ಸರಬರಾಜಾಗುತ್ತಿದೆ. ಶಾಲೆಯ ಸುತ್ತ ಆವರಣಗೋಡೆ, ಐಟಿಡಿಪಿ ಇಲಾಖೆಯಿಂದ ಶುದ್ಧ ನೀರಿನ ಘಟಕ ವ್ಯವಸ್ಥೆ, ಮಲಗಲು ಹಾಸಿಗೆ, ಫ್ಯಾನ್, ಕ್ರೀಡಾ ಸಾಮಗ್ರಿಗಳು ಇವೆ. ತರಗತಿ ಕೊಠಡಿಗಳಿಗೆ ಟೈಲ್ಸ್, ಅಂಗಣಕ್ಕೆ ಇಂಟರ್‌ಲಾಕ್ ಅಳವಡಿಸಲಾಗಿದೆ.
Related Articles
ಮಕ್ಕಳಿಗೆ ಆಟವಾಡಲು ಕ್ರೀಡಾಂಗಣ, ಸಾಂಸ್ಕೃತಿಕ ಚಟುವಟಿಕೆಗೆ ರಂಗಮಂದಿರ, 6 ಮತ್ತು 7ನೇ ತರಗತಿಯ ಬೇಡಿಕೆ ಇದ್ದರೂ ತರಗತಿ ಪ್ರಾರಂಭಿಸಲು ಅನುಮತಿ ಸಿಕ್ಕಿಲ್ಲ. ಹೆಚ್ಚುವರಿ ತರಗತಿ ಕೊಠಡಿಗಳು ನಿರ್ಮಾಣವಾಗಬೇಕಿದೆ. ಪ್ರಸ್ತುತ ಶಾಲೆ ಮತ್ತು ವಸತಿ ನಿಲಯವಿರುವ ಅಂತರ ದೂರವಿದ್ದು, ಒಂದೇ ಕಡೆಯಲ್ಲಿ ಸುಸಜ್ಜಿತ ಶಾಲೆ ಮತ್ತು ವಸತಿಗೃಹ ನಿರ್ಮಾಣವಾಗಬೇಕಿದೆ. ಆಶ್ರಮ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಎಲ್ಲ ಅವಧಿಗಳಲ್ಲಿ ವಾರ್ಷಿಕೋತ್ಸವ ಸಹಿತ ಪಠ್ಯೇತರ ಚಟುವಟಿಕೆಗಳಿಗೆ ಮಕ್ಕಳಿಗೆ ಸರಕಾರದಿಂದ ಅನುದಾನ ಬರುತಿಲ್ಲ. ಸಿಗಬೇಕಿದೆ.
Advertisement
ನಿತ್ಯ ಭಜನೆ ವಿಶೇಷಆಶ್ರಮ ಶಾಲೆಯಲ್ಲಿ ಕಲಿಕೆಗೆ ಒಳ್ಳೆಯ ವಾತಾವರಣವಿದ್ದು, ಕಲಿಕೆಗೆ ಪೂರಕವಾಗಿದೆ. ಜತೆಗೆ ಮಕ್ಕಳು ಕ್ರಿಯಾಶೀಲತೆಯಿಂದ ಚಟುವಟಿಕೆ ಹೊಂದಿದ್ದಾರೆ. ಇತರ ಶಾಲೆಯ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬಂತೆ ಕಲಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನುದಾನ ಬಂದಲ್ಲಿ ಅನುಕೂಲ
ಆಶ್ರಮ ಶಾಲೆ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ಎಲ್ಲ ಪ್ರಯತ್ನಗಳನ್ನು ಇಲ್ಲಿ ನಡೆಸುತ್ತಿದ್ದೇವೆ. ಒಂದಷ್ಟು ಅನುದಾನಗಳು ಲಭ್ಯವಾಗಿವೆ. ಶಾಲೆಯ ಮಕ್ಕಳ ಸರ್ವಾಂಗೀಣ ಸೌಕರ್ಯಗಳಿಗಾಗಿ 4.5 ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ ದೊರೆತು ಅದು ಒದಗಿ ಬಂದಲ್ಲಿ ಮೂಲಸೌಕರ್ಯ ಈಡೇರಿ ಸಮಸ್ಯೆ ಬಗೆಹರಿಯಲಿದೆ. ಇಲಾಖೆ, ಶಿಕ್ಷಕಿಯರು ಹೆತ್ತವರ ದಾನಿಗಳ ಸಹಕಾರ ಅತ್ಯುತ್ತಮವಾಗಿದೆ.
– ಕೃಷ್ಣಪ್ಪ ಬಿ., ಮೇಲ್ವಿಚಾರಕ ಬಾಲಕೃಷ್ಣ ಭೀಮಗುಳಿ