Advertisement
“ಸರಕಾರ ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿ, ಸ್ಥಳೀಯ ಸರಕಾರ, ಜೈವಿಕ ಸುರಕ್ಷಾ ತಜ್ಞರು, ಆಟಗಾರರು, ಪ್ರಸಾರಕರು ಮೊದಲಾದವರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ ಪಂದ್ಯಾವಳಿಯನ್ನು ನಡೆಸಲು ಮುಂದಾಗಿದ್ದೇವೆ. ಮುಂದೆಯೂ ಇವರೆಲ್ಲರ ನಿರಂತರ ಸಂಪರ್ಕದಲ್ಲಿರುತ್ತೇವೆ’ ಎಂದು ಬಿಗ್ ಬಾಶ್ ಲೀಗ್ ಟೂರ್ನಿಯ ಮುಖ್ಯಸ್ಥ ಅಲಿಸ್ಟೇರ್ ಡಾಬ್ಸನ್ ಹೇಳಿದ್ದಾರೆ. ಇದರೊಂದಿಗೆ ಕೋವಿಡ್ ಕಾಲದಲ್ಲಿ 2 ಕ್ರಿಕೆಟ್ ಲೀಗ್‌ಗಳ ವೇಳಾಪಟ್ಟಿ ಘೋಷಣೆಯಾಗಿದೆ. ಇದಕ್ಕೂ ಮುನ್ನ ಆ. 18ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಮೊದಲ್ಗೊಳ್ಳಲಿದೆ.
“ಅಡಿಲೇಡ್ ಓವಲ್’ನಲ್ಲಿ ನಡೆಯುವ ಡಿ.3ರ ಉದ್ಘಾಟನಾ ಪಂದ್ಯದಲ್ಲಿ ಸ್ಟ್ರೈಕರ್ ಮತ್ತು ರೆನೆಗೇಡ್ಸ್ ತಂಡಗಳು ಮುಖಾಮುಖೀಯಾಗಲಿವೆ. ಆಗಷ್ಟೇ ಭಾರತ-ಆಸ್ಟ್ರೇಲಿಯ ನಡುವಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿದಿರುತ್ತದೆ. ಆದರೆ ಭಾರತ-ಆಸ್ಟ್ರೇಲಿಯ ನಡುವಿನ ಅಡಿಲೇಡ್ ಡೇ-ನೈಟ್ ಟೆಸ್ಟ್ ಪಂದ್ಯದ (ಡಿ. 11-15) ವೇಳೆ ಬಿಗ್ ಬಾಶ್‌ಗೆ 5 ದಿನಗಳ ವಿರಾಮ ಘೋಷಿಸಲಾಗಿದೆ.