ಮಂಗಳೂರು: ಸ್ವಸಹಾಯ ಗುಂಪುಗಳ ನಿರ್ವಹಣೆಯಲ್ಲಿ ರಾಜ್ಯ ದಲ್ಲೇ ಗಮನಾರ್ಹ ಸಾಧನೆಗೈದಿ ರುವ ಡಾ| ಎಂ.ಎನ್. ರಾಜೇಂದ್ರ ಕುಮಾರ್ ನಾಯಕತ್ವದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ (ಎಸ್‌ಸಿಡಿಸಿಸಿ ಬ್ಯಾಂಕ್) ನಬಾರ್ಡ್ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಶುಕ್ರ ವಾರ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ನಬಾರ್ಡ್ ಪ್ರಾದೇ ಶಿಕ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾ ಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರಿಂದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ನಬಾರ್ಡ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ರಿಸರ್ವ್ ಬ್ಯಾಂಕ್‌ನ ವಲಯ ನಿರ್ದೇಶಕ ಯುಜಿನ್ ಇ. ಕಾರ್ಥಕ್, ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ /ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಮೆಲ್ವಿನ್ ಓಸ್ವಲ್ಡ್ ರೇಗೊ, ನಬಾರ್ಡ್ ಸಿಜಿಎಂ ಜಿ.ಐ. ಗಣಗಿ ಉಪ ಸ್ಥಿತರಿದ್ದರು. ಎಸ್‌ಸಿಡಿಸಿಸಿ ಬ್ಯಾಂಕಿನ ಮಹಾ ಪ್ರಬಂಧಕ ಬಿ. ರವೀಂದ್ರ ಭಾಗವಹಿಸಿದ್ದರು. 2015-16 ಮತ್ತು 2016-17ನೇ ಸಾಲಿನಲ್ಲಿ ಸ್ವ ಸಹಾಯ ಗುಂಪುಗಳಿಗೆ ಅತೀ ಹೆಚ್ಚು ಸಾಲ ಸಂಯೋಜನೆ, ಸಾಲ ವಸೂಲಾತಿ ಹಾಗೂ ಸ್ವಸಹಾಯ ಗುಂಪುಗಳ ಒಟ್ಟು ವ್ಯವಹಾರದಲ್ಲಿ ಅತ್ಯುತ್ತಮ ಸಾಧನೆಗೈದಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಈ ಪ್ರಶಸ್ತಿ ಲಭಿಸಿದೆ. ಎಸ್‌ಸಿಡಿಸಿಸಿ ಬ್ಯಾಂಕ್ 1999-2000 ಜಾರಿಗೆ ತಂದಂದಿನಿಂದ ಇದುವರೆಗೆ ಒಟ್ಟು 18 ಬಾರಿ ನಬಾರ್ಡ್ ರಾಜ್ಯ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ.
ಸ್ವಸಹಾಯ ಗುಂಪುಗಳ ಸದಸ್ಯರು ಸ್ವಾವಲಂಬಿಗಳಾಗಬೇಕು ಎಂಬ ಆಶಯ ದೊಂದಿಗೆ ಈ ಯೋಜನೆ ಯನ್ನು ಜಾರಿಗೆ ತಂದ ಎಸ್‌ಸಿಡಿಸಿಸಿ ಬ್ಯಾಂಕ್ ಒಟ್ಟು 43,239 ಸ್ವಸಹಾಯ ಗುಂಪುಗಳನ್ನು ವಿವಿಧ ಸಹಕಾರಿ ಸಂಘ ಗಳ ಮೂಲಕ ರಚಿಸಿದೆ. ಇದರಲ್ಲಿ 32,135 ನವೋದಯ ಸ್ವಸಹಾಯ ಗುಂಪುಗಳಾಗಿರುತ್ತವೆ. ಈ ಗುಂಪುಗಳ ಒಟ್ಟು ಉಳಿತಾಯ 94.05 ಕೋಟಿ ರೂ., ಸುಮಾರು 3.50 ಲಕ್ಷ ರೂ.ಗಳಿಗೂ ಮಿಕ್ಕಿದ ಸ್ವಸಹಾಯ ಗುಂಪು ಗಳ ಸದಸ್ಯರ ಸಂಖ್ಯಾಬಲವನ್ನು ಈ ಬ್ಯಾಂಕ್ ಹೊಂದಿದೆ. 38,928 ಗುಂಪುಗಳಿಗೆ 174.90ಕೋಟಿ ರೂ. ಸಾಲ ನೀಡಿದೆ.