Advertisement

ಕೆಂಬಣ್ಣದ ಬೆನ್ನಿನ ಹೂಗುಬ್ಬಿ 

04:00 AM Oct 28, 2017 | |

ಜೋಳಿಗೆಯಾಕಾರದ ಗೂಡನ್ನು ಮಾಡಿ, ಮರದ ಎಲೆಗಳ ಸಂದಿಯಲ್ಲಿ, ಟೊಂಗೆಯ ತುದಿಯಲ್ಲಿ ಜೇಡರ ಬಲೆಯ ಅಂಟು ಉಪಯೋಗಿಸಿ ಗೂಡನ್ನು ಜೋತು ಬಿಡುತ್ತದೆ.SCARLET-BACKED FLOWERPECKER (Dicaeum cruentatum ( Linnaeus) )  R-Sparrow   ತನ್ನ ಮೊಟ್ಟೆ ಇಡಲು ಗೂಡಿನ ತುದಿಯಲ್ಲಿ ಹೆಚ್ಚು ಅಗಲ ಮಾಡಿರುತ್ತದೆ.  ಏಪ್ರಿಲ್‌ ಇಲ್ಲವೇ ಆಗಸ್ಟ್‌ನಲ್ಲಿ ಇದು ಗೂಡು ಕಟ್ಟುತ್ತದೆ.

Advertisement

ಹೂ ಗುಬ್ಬಿಗಳಲ್ಲಿಯೇ ಅತಿ ಚಿಕ್ಕದಾದ ಗುಬ್ಬಿ ಇದು ಎಂದರೆ ತಪ್ಪಾಗಲಾರದು. ಸಾಮಾನ್ಯ ಹೂ ಗುಬ್ಬಿ. ಕೆಂಪು ಎದೆಯ ಹೂಗುಬ್ಬಿ, ದಪ್ಪ ಚುಂಚಿನ ಹೂ ಗುಬ್ಬಿ ಈ ಗುಂಪಿನಲ್ಲಿ ಇರುವ ಇತರ ಪ್ರಬೇಧಗಳು. ಇವುಗಳೆಲ್ಲ ಈ ಕೆಂಪುಬೆನ್ನಿನ ಹೂ ಗುಬ್ಬಿಗಳಿಗಿಂತ ದೊಡ್ಡವು ಮತ್ತು ಇವೆಲ್ಲವೂ ಮೋಟಾದ ತುದಿಯಲ್ಲಿ ಚೌಕವಾಗಿ ಕತ್ತರಿಸಿದಂತೆ ಕಾಣುವ ಚಿಕ್ಕ ಬಾಲವನ್ನು ಹೊಂದಿವೆ. ನೋಡಿದ ತಕ್ಷಣ ಬೆನ್ನಿನ  ಕೆಂಪು ಬಣ್ಣ ಎದ್ದು ಕಾಣುವುದರಿಂದ ಈ ಹಕ್ಕಿಗೆ ಕೆಂಬಣ್ಣದ ಬೆನ್ನಿನ ಹೂ ಗುಬ್ಬಿ ಎಂಬ ಹೆಸರು ಬಂದಿರಬಹುದು.  ಹೂ ಬಿಡುವ ಮರಗಳಿರುವ ಕಾಡು, ಅರೆಕಾಡು, ನೆಡು ತೋಪುಗಳಲ್ಲೆಲ್ಲ ಇವು ಕಾಣಸಿಗುತ್ತವೆ. ಆದರೆ ಹೂಬಿಡುವ, ಅದರಲ್ಲೂ ಉದ್ದವಾದ , ಮಧ್ಯಮ ಉದ್ದದ ಹೂ ಬಿಡುವ ಜಂಬೆ, ಪನ್ನೇರಲೆ, ಲವಂಗದ ಮರಗಳಿರುವ ಜಾಗ ಇವುಗಳಿಗೆ ತುಂಬಾ ಪ್ರಿಯ. 

 ಇಲ್ಲವೇ ಈ ಎಲೆಗಳ ನಡುವೆ ಇರುವ ಚಿಕ್ಕ ಕ್ರಿಮಿಗಳನ್ನು ಹಿಡಿಯಲು ಹಾರುತ್ತಾ ಮೇಲೆ, ಕೆಳಗೆ- ಆಚೆ, ಈಚೆ ಕೆಲವೊಮ್ಮೆ ತಲೆಕೆಳಗಾಗಿ ಸಹ ಸರ್ಕಸ್‌ ಮಾಡುತ್ತಲೇ ಇದು ಹೂವಿನ ಮಕರಂದ ಹೀರುತ್ತದೆ. 
  ಸೀತೆ ದಂಡೆ, ಬಂದಳಕ ಮುಂತಾದ ವಿವಿಧ ಜಾತಿಯ ಹೂ ಬಿಡುವ ಪರೋಪಜೀವಿ ಸಸ್ಯಗಳು ಇರುವೆಡೆ ಇದರ ನೆಲೆ ಇದೆ. ಕೆಂಪು ಬೆನ್ನಿನ ಹೂಗುಬ್ಬಿ ಚಿಕ್ಕದಿದ್ದರೂ ಕಾನುಗುಬ್ಬಿಯಂತೆ ಉರುಟಾಗಿದೆ. ಇದು ಪುಟ್ಟ ರೆಕ್ಕೆ, ಪುಟ್ಟ ತಲೆ. ಹೊಳೆವ ಚುರುಕಾದ ಸುಂದರ ಕಣ್ಣಿನ, ತುಂಬು ಚಟುವಟಿಕೆಯ ಹಕ್ಕಿ. ಇವು ಮರಗಳ ತುದಿಯಲ್ಲಿ ಹೆಚ್ಚಾಗಿ ಇರುತ್ತವೆ. ಆದ್ದರಿಂದ -ದಟ್ಟ ಎಲೆ -ಇಲ್ಲವೇ ಮರಗಳಲ್ಲಿ ಇವುಗಳನ್ನು ಗುರುತಿಸುವುದು ಕಷ್ಟ ಸಾಧ್ಯ. ಆದರೂ ಕೆಲವೊಮ್ಮೆ ನೆಡು ತೋಪು, ಇಲ್ಲವೇ ಹೂಗಿಡಗಳಾದ ದಾಸವಾಳ, ವಿಫ‌ುಲ ಹೂ ಬಿಡುವ ಜಂಬಳೆ, ಪನ್ನೇರಲೆ ಮರಗಳಿಗೆ ಹೂವಿನ ಮಕರಂದ ಕುಡಿಯಲು ಇವು ಹಾಜರಾಗುತ್ತವೆ. 

 ಇದು “ಡೆಸಿಡಿಯಾ’ ಕುಟುಂಬದ ಹಕ್ಕಿ. ಗಂಡು- ಹೆಣ್ಣು ಸ್ವಲ್ಪ ಬೇರೆ ಬಣ್ಣ ಹೊಂದಿವೆ. ಗಂಡು ಹಕ್ಕಿಗೆ ತಲೆಯಿಂದ ಹಿಡಿದು ಬೆನ್ನು ಮತ್ತು ಹಿಂದಿನ ಚಿಕ್ಕ ಬಾಲ ಆರಂಭವಾಗುವವರೆಗೆ ಕೆಂಪು ಬಣ್ಣ ಇದೆ. ಕೆನ್ನೆ ಬದಿ, ಕುತ್ತಿಗೆ, ಚುಂಚು ಕಪ್ಪಾಗಿದೆ. ಕಾಲಿನ ಬೆರಳು ಶೀಘ್ರವಾಗಿ ಟೊಂಗೆಗಳನ್ನು ಹಿಡಿದುಕೊಳ್ಳಲು ಅನುಕೂಲವಾಗುವಂತೆ ಇವೆ.  

 ಬಾಂಗ್ಲಾದೇಶ, ಭೂತಾನ್‌, ಕಾಂಬೋಡಿಯಾ, ಚೈನಾ, ಭಾರತ,ಇಂಡೋನೇಷಿಯಾ, ಮಲೇಶಿಯಾ ಮೈನಾವರ, ನೇಪಾಳ , ಸಿಂಗಾಪುರ, ದೇಶಗಳಲ್ಲೂ ಇದೆ. ನೇಪಾಳದ ಪರ್ವತ ಪ್ರದೇಶಗಳಲ್ಲಿ ಹಾಗೂ ಭಾರತದ ಕಾಡು- ಅರೆಕಾಡಿನ ತುಂಬಾ ಈ ಹಕ್ಕಿ ಇದೆ.  ಸಿಂಗಾಪುರ, ಹಾಂಕಾಗ್‌ನಲ್ಲೂ ಈ ಲಕ್ಷಣದ ಹಕ್ಕಿ ಕಂಡಿದೆ. ಚಿಕ್‌, ಚಿಕ್‌, ಚಿಕ್‌ ಎಂದು ಕೂಗುತ್ತಾ-ಹೆಣ್ಣು , ಗಂಡು -ಸದಾ ದನಿಯ ಮೂಲಕ ಸಂಪರ್ಕ ಇಟ್ಟುಕೊಂಡಿರುತ್ತವೆ. ಮಕರಂದ , ಕಾಳು, ಹುಲ್ಲಿನ ಬೀಜ, ಚಿಕ್ಕ ಕ್ರಿಮಿ ಇಲ್ಲವೇ ಹೂವಿನ ಮಕರಂದ ಇರುವ ಭಾಗದಲ್ಲಿರುವ ಹೂವಿನೊಳಗಿನ -ಚಿಕ್ಕ ಮೃದುವಾದ ಹೂವಿನ ಭಾಗಗಳನ್ನು ತಿನ್ನುತ್ತದೆ. 
 ಹೂವಿನ ಪರಾಗಸ್ಪರ್ಶದಲ್ಲಿ ಇದರ ಪಾತ್ರ ಅತಿ ಹೆಚ್ಚು. ಭಾರತ ಹಿಮಾಲಯ, ಅಸ್ಸಾಂ,  ಕರ್ನಾಟಕದ ಪಶ್ಚಿಮಘಟ್ಟಗಳಲ್ಲೂ ಇದರ ಇರುನೆಲೆಗಳಿವೆ. ಅರುಣಾಚಲ ಪ್ರದೇಶದಲ್ಲೂ ಕಾಣುವ ಈ ಹಕ್ಕಿ ಭಾರತದ ಪ್ರಾದೇಶಿಕ ಹಕ್ಕಿಯೂ ಕೂಡ. 

Advertisement

 ಇತರ ಹೂ ಗುಬ್ಬಿಯಂತೆ ಜೋಳಿಗೆಯಾಕಾರದ ಗೂಡನ್ನು ಮಾಡಿ -ಮರದ ಎಲೆಗಳ ಸಂದಿಯಲ್ಲಿ, ಟೊಂಗೆಯ ತುದಿಯಲ್ಲಿ ಜೇಡರ ಬಲೆಯ ಅಂಟು ಉಪಯೋಗಿಸಿ ಗೂಡನ್ನು ಜೋತು ಬಿಡುತ್ತದೆ.  ತನ್ನ ಮೊಟ್ಟೆ ಇಡಲು ಗೂಡಿನ ತುದಿಯಲ್ಲಿ ಹೆಚ್ಚು ಅಗಲ ಮಾಡಿರುತ್ತದೆ.   ಏಪ್ರಿಲ್‌ ಇಲ್ಲವೇ ಆಗಸ್ಟ್‌ನಲ್ಲಿ ಇದು ಗೂಡು ಕಟ್ಟುತ್ತದೆ. ಗೂಡು ಕಟ್ಟಲು ಸ್ಥಳದ ಆಯ್ಕೆ, ಬೇಕಾದ ಪರಿಕರ , ನಾರು ಬೇರು, ಹುಲ್ಲು , ಅಂಟಿಸಿ ಭದ್ರಪಡಿಸಲು ವಿವಿಧ ಜೇಡರ ಬಲೆಗಳನ್ನು ಗಂಡು- ಹೆಣ್ಣು ಸೇರಿ -ಸಂಗ್ರಹಿಸಿ, ಸುಂದರ  ಗೂಡು ಕಟ್ಟುತ್ತವೆ.  ಗೂಡಿನ ಸ್ಥಳದ ಆಯ್ಕೆಯಲ್ಲಿ ವಿಫ‌ುಲ ಆಹಾರ ಇರುವ ಸ್ಥಳಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತದೆ.  

ಪಿ. ವಿ. ಭಟ್‌ ಮೂರೂರು 

Advertisement

Udayavani is now on Telegram. Click here to join our channel and stay updated with the latest news.

Next