Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಆಡಳಿತದಲ್ಲಿ 1 ಲಕ್ಷ 76 ಸಾವಿರ ಕೋಟಿ ರೂ. 2ಜಿ, 2 ಲಕ್ಷ 84 ಸಾವಿರ ಕೋಟಿ ರೂ. ಕಲ್ಲಿದ್ದಲು, ಸ್ಪೆಕ್ಟ್ರಂ, ಕ್ರೀಡೆ ಸೇರಿದಂತೆ ಪ್ರತಿಯೊಂದರಲ್ಲೂ ಸಹಿತ ಭ್ರಷ್ಟಾಚಾರ-ಹಗರಣ ಮಾಡಿದರು. ಈಗ ಪ್ರಧಾನಿ ಮೋದಿ ನೇತೃತ್ವದ ಸರಕಾರ ಎಲ್ಲದರಲ್ಲೂ ಅತ್ಯಂತ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಿದೆ. ದೇಶದಲ್ಲಿ 58-59 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ನಾಯಕರು ಯಾವ ರೀತಿ ಲೂಟಿ ಮಾಡಿದರು. ದೇಶದ ಸ್ಥಿತಿ ಯಾವ ಮಟ್ಟಕ್ಕೆ ತಂದಿದ್ದರು. ರಕ್ಷಣಾ ವ್ಯವಸ್ಥೆ ಹೇಗಿತ್ತು. ತುಷ್ಟೀಕರಣದ ರಾಜಕಾರಣ ಮಾಡಿದರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅವರು ಬೆಲೆ ಏರಿಕೆ ವಿಚಾರವಾಗಿ 50 ವರ್ಷಗಳ ನಂತರ ಪ್ರತಿಭಟಿಸುವುದನ್ನು ಕಲಿತಿದ್ದಾರೆ. ಆ ಮೂಲಕ ವಿಪಕ್ಷದಲ್ಲಿದ್ದೇವೆಂಬ ಬಗ್ಗೆ ನೆನಪಾಗುತ್ತಿದೆ. ವಿಪಕ್ಷದವರಾಗಿ ಅವರು ಎಚ್ಚರಿಸಲಿ, ಅವರ ಭಾವನೆಗಳನ್ನು ಗಮನಿಸುತ್ತೇವೆ ಎಂದರು.
Related Articles
Advertisement
ಸಿದ್ದರಾಮಯ್ಯ ಮತ್ತು ಅವರ ಪಕ್ಷ ಮುಸಲ್ಮಾನರನ್ನು ಓಲೈಸಲು ಆರೆಸ್ಸೆಸ್ ಬೈಯ್ದರೆ ಅವರಿಂದ ವೋಟು ಸಿಗುತ್ತೆ ಎಂಬ ಭ್ರಮೆಯಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಸತತ ತುಷ್ಟೀಕರಣದ ರಾಜಕಾರಣವನ್ನೇ ಮಾಡುತ್ತಾ ಬಂದಿದೆ. ಅದರಿಂದ ಅದರ ಸ್ಥಿತಿ ಹೀಗಾಗಿದೆ. ಆದರೂ ಸಿದ್ದರಾಮಯ್ಯನವರು ಬುದ್ಧಿ ಕಲಿಯುತ್ತಿಲ್ಲ ಎಂದರು.