Advertisement

Udupi ಟ್ರೇಡಿಂಗ್‌ ಲಿಂಕ್‌ ಮೂಲಕ ವಂಚನೆ

01:10 AM Jan 13, 2024 | Team Udayavani |

ಉಡುಪಿ: ಟ್ರೇಡಿಂಗ್‌ ಲಿಂಕ್‌ ಮೂಲಕ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಬಿ. ಚಂದ್ರಶೇಖರ ಹೆಗ್ಗೊàಡ್ಲು ಅವರನ್ನು ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸ್‌ ಆ್ಯಪ್‌ ಮೂಲಕ ಸಂಪರ್ಕಿಸಿ, ಟ್ರೇಡಿಂಗ್‌ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಟ್ರೇಡಿಂಗ್‌ ಆ್ಯಪ್‌ ಲಿಂಕ್‌ ಕಳುಹಿಸಿದ್ದರು. ಇದನ್ನು ನಂಬಿದ ಅವರು, ಅದರಲ್ಲಿದ್ದ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಮಾಹಿತಿಯನ್ನು ನಮೂದಿಸಿದ್ದರು.

Advertisement

ಅನಂತರದಲ್ಲಿ ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಡಿ.19ರಿಂದ ಜ. 8ರ ವರೆಗೆ ಹಂತ-ಹಂತವಾಗಿ 61,90,000 ರೂ. ಪಾವತಿಸಿದ್ದರು.

ಆದರೆ ಇದುವರೆಗೂ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೇ ಆರೋಪಿಗಳು ಮೋಸ ಮಾಡಿದ್ದಾರೆ ಎಂದು ಅವರು ಸೆನ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next