Advertisement

Scam: ಆರೋಪಿ ವಿ.ವಿ. ಕುಲಸಚಿವ ಅಮಾನತು, ಕುಲಪತಿ ರಾಜೀನಾಮೆಗೆ ಎಬಿವಿಪಿ ಆಗ್ರಹ

11:36 PM Feb 06, 2024 | Team Udayavani |

ಮಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಕೋಚಿಮುಲ್‌) ಉದ್ಯೋಗಿಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣದಲ್ಲಿ ಕೈಜೋಡಿಸಿದ ಮಂಗಳೂರು ವಿ.ವಿ.ಯ ಅಧಿಕಾರಿಗಳನ್ನು ವಜಾಮಾಡಬೇಕು, ಪರೀಕ್ಷಾಂಗ ಕುಲಸಚಿವರನ್ನು ಅಮಾನತುಗೊಳಿಸಬೇಕು ಹಾಗೂ ಪ್ರಭಾರ ಕುಲಪತಿ ರಾಜೀನಾಮೆ ನೀಡಬೇಕು, ರಾಜ್ಯ ಸರಕಾರ ಕೂಡಲೇ ಖಾಯಂ ಕುಲಪತಿಯನ್ನು ನೇಮಿಸಬೇಕು ಎಂದು ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳೂರು ಆಗ್ರಹಿಸಿದೆ.

Advertisement

ರಾಷ್ಟ್ರೀಯ ಕಾರ್ಯಕಾರಿಆಣಿ ಸದಸ್ಯ ಶ್ರೀರಾಮ್‌ ಅಂಗೀರಸ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋಚಿಮುಲ್‌ ಪರೀಕ್ಷಾ ಅವ್ಯವಹಾರ ವಿಚಾರವಾಗಿ ಜಾರಿ ನಿರ್ದೇಶನಾಲಯ (ಇಡಿ) ವ್ಯವಸ್ಥಾಪಕ ನಿರ್ದೇಶಕ, ಅಧಿಕಾರಿಗಳು, ಕೆಲವು ನಿರ್ದೇಶಕರನ್ನು ಇಡಿ ತನಿಖೆ ನಡೆಸಿ, ಮಾಹಿತಿ ಕಲೆ ಹಾಕಿದೆ. ಮಂಗಳೂರು ವಿ.ವಿ.ಗೂ ದಾಳಿ ನಡೆಸಿತ್ತು. ಪರೀಕ್ಷಾಂಗ ಕುಲಸಚಿವ ಪ್ರೊ| ರಾಜು ಚೆಲ್ಲಣ್ಣನವರ್‌ ಪರೀಕ್ಷೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಮೇಲೆ ಪ್ರಶ್ನೆಪತ್ರಿಕೆ ಮಾರಾಟ ಆರೋಪವಿದ್ದು, ಇಡಿ ತಂಡದ ದಾಳಿ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಬೇಕು ಎಂದರು.

“ವಿವಿ ಚಲೋ’ ಎಚ್ಚರಿಕೆ
ವಿ.ವಿ. ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಪರೀûಾ ನಿರ್ವಹಣೆಯಲ್ಲಿ ಎಡವಿದೆ. ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ, ವಿದೇಶಿ ಉದ್ಯೋಗದಿಂದ ವಂಚಿತಗೊಳ್ಳುತ್ತಿದ್ದಾರೆ. ಈ ಬಗ್ಗೆ ಇರದ ಆಸಕ್ತಿ ಹೊರಗಿನ ಪರೀಕ್ಷೆ ನಡೆಸಲು ಇರುವುದು ಖೇದಕರ. ಗೊಂದಲದ ಗೂಡಾಗಿರುವ ವಿ.ವಿ.ಯಲ್ಲಿ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ನಡೆಯಲು ಸರಕಾರ ಗಮನ ಹರಿಸದೇ ಇದ್ದರೆ ವಿ.ವಿ. ವ್ಯಾಪ್ತಿಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸಿ “ವಿವಿ ಚಲೋ’ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

7 ತಿಂಗಳಿಂದ ಖಾಯಂ ಕುಲಪತಿ ನೇಮಕವಾಗಿಲ್ಲ. ಸಿಂಡಿಕೇಟ್‌ ಸದಸ್ಯರನ್ನು ನೇಮಿಸಿರುವ ಸರಕಾರ
ಕುಲಪತಿ ನೇಮಕದ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಶೈಕ್ಷಣಿಕ ಚಟು ವಟಿಕೆಗಳಲ್ಲಿ ಅನಿಶ್ಚಿತತೆ ತಲೆದೋರಿದೆ. ಘಟಿಕೋತ್ಸವ ಸಮೀಪಿಸುತ್ತಿದ್ದು, ಪ್ರಭಾರ ಕುಲಪತಿ ಕರ್ತವ್ಯದಲ್ಲಿದ್ದಾರೆ, ಕುಲಸಚಿವರು (ಆಡಳಿತ) ಅಧಿಕಾರ ವಹಿಸಿಕೊಂಡಿಲ್ಲ. ಇಡಿ ದಾಳಿಯ ಬಳಿಕ ಪರೀಕ್ಷಾಂಗ ಕುಲಸಚಿವರು ಆರೋಗ್ಯದ ಕಾರಣ ನೀಡಿ ಆಸ್ಪತ್ರೆಯಲ್ಲಿದ್ದಾರೆ. ಹಿರಿಯ ಸಿಬಂದಿ,ಅಧ್ಯಾಪಕರಿಗೆ ಜವಾಬ್ದಾರಿ ಹೊರಿಸ ಲಾಗಿದೆ. ಹೀಗಾಗಿ ಮುಖ್ಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ವಾಗುತ್ತಿಲ್ಲ. ಆದ್ದರಿಂದ ಕೂಡಲೇ ಕುಲಪತಿ ನೇಮಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್‌ , ವಿಭಾಗ ಸಂಚಾಲಕ ನಿಶಾನ್‌ ಆಳ್ವ, ತಾಲೂಕು ಸಂಚಾಲಕ ಆದಿತ್ಯ ಶೆಟ್ಟಿ, ಮಹಾನಗರ ಸಂಚಾಲಕ ಶ್ರೇಯಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next