ನವದೆಹಲಿ: ಕೇರಳದಲ್ಲಿ ತೀವ್ರ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಿದ್ದ ಎಂಡೋಸಲ್ಫಾನ್ ಕೀಟನಾಶಕದ ಪ್ರಕರಣವನ್ನು, ಸರ್ವೋಚ್ಚ ನ್ಯಾಯಾಲಯ ಕೇರಳ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿದೆ.
2011ರವರೆಗೆ ಕೇರಳದಲ್ಲಿ ಗೋಡಂಬಿ, ಹತ್ತಿ, ಟೀ, ಹಣ್ಣುಗಳ ಬೆಳೆಗಳಿಗೆ ಎಂಡೋಸಲ್ಫಾನನ್ನು ಸಿಂಪಡಿಸುತ್ತಿದ್ದರು. ಅನಂತರ ಇದರ ಬಳಕೆಯನ್ನು ಸಂಪೂರ್ಣ ನಿಲ್ಲಿಸಲಾಯಿತು. ಇದರಿಂದ ಸಾಕಷ್ಟು ಮಾರಣಾಂತಿಕ ಅನಾರೋಗ್ಯಗಳು ಸಂಭವಿಸಿದ್ದರಿಂದ ಈ ತೀರ್ಮಾನಕ್ಕೆ ಬರಲಾಗಿತ್ತು.
ಈಗಾಗಲೇ ಹಾನಿಗೊಳಗಾದ ವ್ಯಕ್ತಿಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ. ಇನ್ನುಳಿದಿರುವುದು ಅನಾರೋಗ್ಯಪೀಡಿತ ವ್ಯಕ್ತಿಗಳಿಗೆ ವೈದ್ಯಕೀಯ ಮತ್ತು ಉಪಶಮನಕಾರಿ ನೆರವು ನೀಡುವುದು. ಇದನ್ನು ದಿನವಹಿ ಆಧಾರದ ಮೇಲೆ ಕೇರಳ ಉಚ್ಚ ನ್ಯಾಯಾಲಯವೇ ಗಮನಿಸಬೇಕೆಂದು ಸರ್ವೋಚ್ಚ ಪೀಠ ಹೇಳಿದೆ. ಇದೇ ವೇಳೆ ಸರ್ವೋಚ್ಚ ಪೀಠ ಕೇರಳ ಸರ್ಕಾರದ ವಿರುದ್ಧ ದಾಖಲಿಸಿಕೊಂಡಿದ್ದ ಮಾನನಷ್ಟು ಮೊಕದ್ದಮೆಯನ್ನು ತೆಗೆದುಹಾಕಿದೆ. ಪೀಠದ ಆದೇಶವನ್ನು ಸರ್ಕಾರ ಪಾಲಿಸುತ್ತಿಲ್ಲ ಎಂದು ಈ ಹಿಂದೆ ದೂರು ದಾಖಲಾಗಿತ್ತು.