Advertisement

ಸಲಿಂಗಕಾಮ ಅಪರಾಧವಲ್ಲ, ಸೆ.377 ರದ್ದು : ಸುಪ್ರೀಂ ಐತಿಹಾಸಿಕ ತೀರ್ಪು

12:12 PM Sep 06, 2018 | udayavani editorial |

ಹೊಸದಿಲ್ಲಿ : ಸಲಿಂಗಕಾಮ ಅಪರಾಧವಲ್ಲ ಎಂದು ಐತಿಹಾಸಿಕ ತೀರ್ಪು ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಐಪಿಸಿ ಸೆ.377 ಅನ್ನು ಹೊಡೆದು ಹಾಕಿದೆ. 

Advertisement

ಸಲಿಂಗಕಾಮವನ್ನು ಅಪರಾಧೀಕರಿಸುವ ಸುಮಾರು 158 ವರ್ಷಗಳಷ್ಟು ಹಳೆಯ IPC ಸೆ.377ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ಮೇಲಿನ ವಿಚಾರಣೆಯನ್ನು ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ರೊಹಿನ್‌ಟನ್‌ ನಾರಿಮನ್‌, ಎ ಎಂ ಖಾನ್‌ವಿಲ್‌ಕರ್‌, ಡಿವೈ ಚಂದ್ರಚೂಡ್‌ ಮತ್ತು ಇಂದೂ ಮಲೋತ್ರ ಅವರನ್ನು ಒಳಗೊಂಡ ಐವರು ಸದಸ್ಯರ ಸುಪ್ರೀಂ ಪೀಠವು ಇಂದು ಈ ಮಹತ್ವದ ತೀರ್ಪು ನೀಡಿತು. 

ಐಪಿಸಿ ಸೆ.377ರ ಪ್ರಕಾರ ಅನೈಸರ್ಗಿಕವಾಗಿ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಗುದ ಸಂಭೋಗ ನಡೆಸುವ ಮೂಲಕ ಅಸಹಜ ಲೈಂಗಿಕ ಅಪರಾಧ ಎಸಗುವ ಯಾರಿಗೆ ಆದರೂ  ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷ ವರೆಗಿನ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next