Advertisement
ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ತತ್‌ಕ್ಷಣ ಆರೋಪಿಗಳನ್ನು ಬಂಧಿ ಸುವ ಅವಕಾಶವನ್ನು ರದ್ದುಪಡಿಸಿದ್ದ ಕೋರ್ಟ್, ಹೊಸ ಮಾರ್ಗಸೂಚಿಗಳುಳ್ಳ ತೀರ್ಪನ್ನು ಕಳೆದ ವರ್ಷ ಪ್ರಕಟ ಮಾಡಿತ್ತು. ಮಂಗಳವಾರ ನಡೆದ ವಿಚಾರಣೆಯಲ್ಲಿ ಈ ತೀರ್ಪಿನ ಕೆಲವು ಅಂಶಗಳನ್ನು ಅದು ವಾಪಸ್ ಪಡೆದು, ತೀರ್ಪನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಂದರೆ ಇನ್ನು ಮುಂದೆ ಜಾತಿ ನಿಂದನೆ ದೂರು ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸಬಹುದು.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎ.ಆರ್. ಶಾ ಮತ್ತು ಬಿ.ಆರ್. ಗವಾಯಿ ಅವರುಳ್ಳ ಪೀಠವು ಹಿಂದಿನ ತೀರ್ಪಿನಲ್ಲಿ ನೀಡಲಾಗಿದ್ದ ಮಾರ್ಗಸೂಚಿಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಸಮಾನತೆಗಾಗಿ ಪರಿಶಿಷ್ಟರು ಈಗಲೂ ಹೋರಾಡುತ್ತಿದ್ದಾರೆ ಎಂದು ಹೇಳಿತು. ಎಲ್ಲರೂ ಸುಳ್ಳು ದೂರು ನೀಡುವುದಿಲ್ಲ
ಜತೆಗೆ ಯಾರೋ ಒಬ್ಬರು ಎಸ್ಸಿ ಮತ್ತು ಎಸ್ಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದ ಮಾತ್ರಕ್ಕೆ ಕಾಯ್ದೆಯ ಪರಿಣಾಮಕಾರಿ ಅಂಶಗಳನ್ನು ಬದಲಿಸುವುದು ಸರಿಯಲ್ಲ. ಸುಳ್ಳು ದೂರುಗಳನ್ನು ಕೇವಲ ಪರಿಶಿಷ್ಟರಷ್ಟೇ ನೀಡು ವುದಿಲ್ಲ. ಮೇಲ್ವರ್ಗದ ಜನರೂ ನೀಡುತ್ತಾರೆ ಎಂದು ನ್ಯಾಯಪೀಠ ಹೇಳಿತು.
Related Articles
ಸೂಚನೆ 3: ಜಾತಿ ನಿಂದನೆ ಆರೋಪಕ್ಕೆ ಗುರಿ ಯಾಗಿರುವಾತ ಸರಕಾರಿ ನೌಕರನಾಗಿದ್ದಲ್ಲಿ ಆತನನ್ನು ಬಂಧಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು. ಆರೋಪಿಯು ಸರಕಾರಿ ನೌಕರನಾಗಿರದಿದ್ದಲ್ಲಿ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯ ಗಮನಕ್ಕೆ ದೂರನ್ನು ತಂದು, ಅವರಿಂದ ಲಿಖೀತ ರೂಪದ ಅನುಮತಿ ಪಡೆದ ಅನಂತರವಷ್ಟೇ ಬಂಧಿಸಬೇಕು. ಇನ್ನು ಆರೋಪಿಗಳ ಬಂಧನಾವಧಿ ವಿಸ್ತರಣೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಆಣತಿಯನ್ನು ಪಾಲಿಸಬೇಕು. ಆರೋಪಿಯ ಹೇಳಿಕೆಗಳನ್ನು ದಾಖಲಿಸಬೇಕು ಎಂಬ ಆವಶ್ಯಕತೆ ಕಂಡುಬಂದಲ್ಲಿ ಮಾತ್ರ ಈ ಸೂಚನೆ ಅನುಸರಿಸಬೇಕು.
Advertisement
ಸೂಚನೆ 4: ದೂರುದಾರರು ಮಾಡಿರುವ ಆರೋಪ ಗಳು ಜಾತಿ ನಿಂದನೆ ಆರೋಪಕ್ಕೆ ನಿಜ ವಾಗಿಯೂ ಅರ್ಹವೆ, ಅಲ್ಲವೇ ಎಂಬುದನ್ನು ಡಿಎಸ್‌ಪಿ ನೇತೃತ್ವದಲ್ಲಿ ತನಿಖೆಗೊಳಪಡಿಸಬೇಕು.
ಸೂಚನೆ 5: ಸೂಚನೆ 3 ಮತ್ತು 4ನ್ನು ಉಲ್ಲಂ ಸಿ ದಲ್ಲಿ ಅಂಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು.
ತೀರ್ಪಿನಲ್ಲಿನ ಪ್ರಮುಖಾಂಶಗಳು– ಕೆಳವರ್ಗದಲ್ಲಿರುವುದರಿಂದ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದೇ ತಪ್ಪು ಕಲ್ಪನೆ. – ಮೀಸಲಾತಿಯ ಹೊರತಾಗಿಯೂ ಅಭಿವೃದ್ಧಿಯ ಫಲ ಎಸ್‌ಸಿ-ಎಸ್‌ಟಿ ವರ್ಗಕ್ಕೆ ಸಿಕ್ಕೇ ಇಲ್ಲ . – ಹಲವಾರು ರಾಜ್ಯಗಳಲ್ಲಿ ಇನ್ನೂ ಜಾರಿಯಲ್ಲಿದೆ ಅಸ್ಪ ƒಶ್ಯತೆ – ಗ್ರಾಮಾಂತರ, ಕುಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜನಕ. – ಚರಂಡಿ ಸ್ವತ್ಛತಾ ಕಾರ್ಮಿಕರನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನ್ಯಾಯಪೀಠ ಹೇಳಿದ್ದೇನು?
ಈ ಮೂರೂ ಮಾರ್ಗಸೂಚಿಗಳು, ಜಾತಿನಿಂದನೆ ಪ್ರಕರಣಗಳ ತನಿಖೆಯ ವೇಗವನ್ನು ಕುಂಠಿತಗೊಳಿಸುತ್ತವೆ. ಸೂಚನೆ 3ರಲ್ಲಿ, ಜಾತಿ ನಿಂದನೆ ಮಾಡಿದ ಸರಕಾರಿ ಅಧಿಕಾರಿಯನ್ನು ಬಂಧಿಸಲು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು ಎಂಬುದು ಕ್ರಿಮಿನಲ್ ದಂಡ ಸಂಹಿತೆಯ 197ನೇ ಕಲಂನ ಆಶಯಗಳಿಗೆ ಧಕ್ಕೆ ತರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಇನ್ನುಳಿದ ಮಾರ್ಗಸೂಚಿಯಲ್ಲಿರುವ ಆವಶ್ಯಕತೆ ಬಿದ್ದಲ್ಲಿ ಮಾತ್ರ ತನಿಖೆ ಎಂಬ ವಿಚಾರ, ಜಾತಿನಿಂದನೆಯಿಂದ ಅವಮಾನಕ್ಕೊಳಗಾದ ವ್ಯಕ್ತಿಯು, ತ್ರಿಶಂಕು ಸ್ಥಿತಿಯಲ್ಲಿ ನಿಲ್ಲುವಂತೆ ಮಾಡುತ್ತದೆ. ಜತೆಗೆ, ಮೇಲ್ವರ್ಗದ ವ್ಯಕ್ತಿಗಳು, ಪರಿಶಿಷ್ಟರ ವಿರುದ್ಧವೇ ಮರು ದೂರು ದಾಖಲಿಸಬಹುದಾದ ಅವಕಾಶ ಕಲ್ಪಿಸುವುದರಿಂದ ಇಲ್ಲಿ ಪರಿಶಿಷ್ಟರು ಶೋಷಣೆಗೆ ಈಡಾಗುವ ಅಪಾಯವಿದೆ ಎಂದು ನ್ಯಾಯಪೀಠ ಹೇಳಿತು.