Advertisement

ಎಸ್ಸಿ,ಎಸ್ಟಿ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಸಿಗಲಿದೆ ಡೈನಿಂಗ್‌ ಟೇಬಲ್

08:20 AM Jul 27, 2017 | Team Udayavani |

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸ್ಟೆಲ್‌ಗ‌ಳು, ವಸತಿ ಶಾಲೆಗಳಿಗೆ ರಾಜ್ಯ ಸರ್ಕಾರ “ಡೈನಿಂಗ್‌ ಟೇಬಲ್‌’ ಭಾಗ್ಯ ಕರುಣಿಸಿದೆ.

Advertisement

ಬಹುತೇಕ ಹಾಸ್ಟೆಲ್‌ಗ‌ಳಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವ ಪರಿಸ್ಥಿತಿ ಇರುವುದರಿಂದ ಡೈನಿಂಗ್‌ ಟೇಬಲ್‌ ವ್ಯವಸ್ಥೆ ಕಲ್ಪಿಸಲು 104.49 ಕೋಟಿ ರೂ.ಮೊತ್ತದ nಯೋಜನೆ ರೂಪಿಸಿದೆ.

ಎಸ್‌ಸಿ-ಎಸ್‌ಟಿ ವಸತಿ ನಿಲಯಗಳಿಗೆ 7,712 ಡೈನಿಂಗ್‌ ಟೇಬಲ್‌ಗ‌ಳಿಗೆ 14.21 ಕೋಟಿ ರೂ., ವಸತಿ ಶಿಕ್ಷಣ
ಸಂಸ್ಥೆಗಳ ಹಾಸ್ಟೆಲ್‌ಗ‌ಳಿಗೆ 6300 ಡೈನಿಂಗ್‌ ಟೇಬಲ್‌ಗ‌ಳಿಗಾಗಿ 11.61 ಕೋಟಿ ರೂ., ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯಗಳ ಪೀಠೊಪಕರಣಕ್ಕೆ 78.67 ಕೋಟಿ ರೂ. ವೆಚ್ಚ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, ಈ ಬಗ್ಗೆ ಮಾಹಿತಿ ನೀಡಿದರು. ಅಂಬೇಡ್ಕರ್‌ ಅಭಿವೃದಿಟಛಿ ನಿಗಮ, ಸಫಾಯಿ ಕರ್ಮಚಾರಿ ಆಯೋಗ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ನಿಗಮ ಮತ್ತು ಸಂಸ್ಥೆಗಳ ನಿರ್ವಹಣೆ ಒಂದೇ ಕಟ್ಟಡದಲ್ಲಿ ಇರುವಂತೆ ಬೆಂಗಳೂರಿನ ಸಂಪಂಗ
ರಾಮನಗರದಲ್ಲಿ 23.35 ಕೋಟಿ ರೂ.ವೆಚ್ಚದಲ್ಲಿ “ಅಂಬೇಡ್ಕರ್‌ ಸ್ಫೂರ್ತಿಸೌಧ’ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ.

ಕಲಬುರಗಿ ಜಿಲ್ಲೆ ಗಂಡೂರಿ ನಾಲಾ ಬಲದಂಡೆ ಮತ್ತು ಎಡದಂಡೆ ಕಾಲುವೆಗಳ ಆಧುನೀಕರಣ ಕಾಮಗಾರಿಗೆ 92 ಕೋಟಿ ರೂ., ಮುಲ್ಲಾಮಾರಿ ನಾಲಾದ ಬಲದಂಡೆ ಮತ್ತು ಎಡದಂಡೆ ಕಾಲುವೆಗಳ ಆಧುನೀಕರಣಕ್ಕೆ 160.60 ಕೋಟಿ ರೂ. ವೆಚ್ಚಕ್ಕೆ ಒಪ್ಪಿಗೆ ನೀಡಲಾಯಿತು.

Advertisement

2017-18 ನೇ ಸಾಲಿನಲ್ಲಿ ಕೃಷಿ ಗ್ರಾಮೀಣಾಭಿವೃದಿಟಛಿ ಬ್ಯಾಂಕ್‌ಗಳು ನಬಾರ್ಡ್‌ ನಿಂದ ಪಡೆಯುವ 1,550 ಕೋಟಿ ರೂ. ಸಾಲಕ್ಕೆ ರಾಜ್ಯ ಸರ್ಕಾರದ ವತಿಯಿಂದ ಖಾತರಿ ನೀಡಲು ಸಂಪುಟ ಸಮ್ಮತಿಸಿತು.ಚನ್ನಪಟ್ಟಣದಲ್ಲಿ 8.77 ಕೋಟಿ ರೂ. ವೆಚ್ಚದಲ್ಲಿ ಮೃದು ರೇಷ್ಮೆ ಘಟಕ ಸ್ಥಾಪನೆಗೂ ಅನುಮೋದನೆ ನೀಡಲಾಗಿದೆ.

ಮೀನುಗಾರರಿಗೆ 3,000 ಮನೆ:
ಮತ್ಸಾéಶ್ರಯ ಯೋಜನೆಯಡಿ ಮೀನುಗಾರರ ಕುಟುಂಬಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮ ಮೂಲಕ 3 ಸಾವಿರ ಮನೆ ನಿರ್ಮಿಸಿಕೊಡುವ 40.76 ಕೋಟಿ ರೂ.ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next