Advertisement

ಎಸ್ಸಿ, ಎಸ್ಟಿ ಕಾಯ್ದೆ ದುರ್ಬಳಕೆ ಸಲ್ಲದು: ಹೈಕೋರ್ಟ್‌

10:26 PM Nov 03, 2021 | Team Udayavani |

ಬೆಂಗಳೂರು: ಪ್ರತಿಯೊಂದು ಅಪರಾಧ ಪ್ರಕರಣದಲ್ಲೂ ಸಂತ್ರಸ್ತರು ಎಸ್ಸಿ, ಎಸ್ಟಿ ಜನಾಂಗಕ್ಕೆ ಸೇರಿದವರು ಎಂಬ ಕಾರಣವೊಂದರಿಂದಲೇ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ನಿಯಮಗಳನ್ನು ಅನ್ವಯಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ.

Advertisement

ತಮ್ಮ ವಿರುದ್ಧದ ದೂರು ರದ್ದುಪಡಿಸುವಂತೆ ಕೋರಿ ನಗರದ ರಾಜಾಜಿನಗರ ನಿವಾಸಿಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.

ಪ್ರತಿಯೊಂದು ಅಪರಾಧ ಪ್ರಕರಣದಲ್ಲಿ ಸಂತ್ರಸ್ತರು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಯುದಾಯಕ್ಕೆ ಸೇರಿದವರಾದರೆ, ಆಗ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ 3 ಅನ್ನು ವಿಧಿಸಲಾಗದು. ಅಪರಾಧದ ಹಿಂದಿನ ಉದ್ದೇಶವು ಜಾತಿ ನಿಂದನೆಯಾಗಿರದಿದ್ದರೆ ಎಸ್ಸಿ, ಎಸ್ಸಿ ಕಾಯ್ದೆಯ ನಿಬಂಧನೆಗಳನ್ನು ಹೇರದೆ, ಐಪಿಸಿ ಸೆಕ್ಷನ್‌ಗಳಡಿ ಪರಿಗಣಿಸುವುದು ಸೂಕ್ತ ಎಂದು ನ್ಯಾಯಪೀಠ ಹೇಳಿದೆ.

ಎಸ್ಸಿ, ಎಸ್ಟಿ ಕಾಯ್ದೆಯ ನಿಜವಾದ ಆಶಯ ದೌರ್ಜನ್ಯ ಮತ್ತು ತಾರತಮ್ಯದಿಂದ ಆ ಸಮುದಾಯವನ್ನು ರಕ್ಷಿಸುವುದಾಗಿದ್ದರೂ ಸಹ, ಅದನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಆರೋಪಪಟ್ಟಿಗಳನ್ನು ಸಲ್ಲಿಸುವಾಗ ವಿವೇಕದ ನಿರ್ಧಾರವನ್ನು ಕೈಗೊಳ್ಳುವ ಹೊಣೆಗಾರಿಕೆ ತನಿಖಾಧಿಕಾರಿಗಳ ಮೇಲಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ:ವಿದೇಶಕ್ಕೆ ಕಳ್ಳಸಾಗಣೆಯಾಗುತ್ತಿದ್ದ ವಿಗ್ರಹ ವಶ

Advertisement

ಪ್ರಕರಣದ ಹಿನ್ನೆಲೆ
ಶ್ರೀಸಂಗಮ್‌ ಪ್ರಿಯ ಅವರ ದೂರು ಆಧರಿಸಿ ಬೆಂಗಳೂರಿನ ಹಲಸೂರು ಪೊಲೀಸರು ಅರ್ಜಿದಾರರ ವಿರುದ್ಧ ಎಸ್ಸಿ ಎಸ್ಟಿ ಕಾಯ್ದೆ ಸೆಕ್ಷನ 3(1)(ಎಫ್‌), 3(1)(ಜಿ) ಮತ್ತು ಐಪಿಸಿ ಸೆಕ್ಷನ್‌ 172 ಮತ್ತು 173 ರಡಿ ಎಫ್‌ಐಆರ್‌ ದಾಖಲಿಸಿದ್ದರು. ಇಬ್ಬರ ನಡುವೆ ಆಸ್ತಿ ವಿವಾದ ಏರ್ಪಟ್ಟಿತ್ತು. ಆದೇ ಕಾರಣಕ್ಕಾಗಿ ಶ್ರೀ ಸಂಗಮ್‌ ಪ್ರಿಯ ತಮ್ಮ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆ ದುರ್ಬಳಕೆ ಮಾಡಿಕೊಂಡು ಸುಳ್ಳು ಕೇಸು ದಾಖಲಿಸಿದ್ದಾರೆ. ಹಾಗಾಗಿ ಅದನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್‌ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next