Advertisement

ಎಸ್‌ಸಿ,ಎಸ್‌ಟಿ ಮಕ್ಕಳಿಗೆ 5 ಮೊಟ್ಟೆ…ಉಳಿದ ಮಕ್ಕಳಿಗೆ 2 ಮೊಟ್ಟೆ…!

12:55 PM Jun 08, 2017 | |

ವಿಧಾನಸಭೆ: ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಐದು ಮೊಟ್ಟೆ, ಇನ್ನುಳಿದ ಜಾತಿಯ ಮಕ್ಕಳಿಗೆ 2 ಮೊಟ್ಟೆ. ಏನ್‌ ಸರ್ಕಾರಾ ರೀ ಇದು? ಎಂಥಾ ಸಮಾಜ ನಿರ್ಮಾಣ ಮಾಡಲು ಹೊರಟಿದೆ? ಮಕ್ಕಳ ಮನಸ್ಸಿನಲ್ಲೂ ಜಾತಿ ಬಿತ್ತುವುದಕ್ಕೆ ಇದಕ್ಕಿಂತ ಬೇರೆ ಯೋಜನೆ ಬೇಕಾ?ಬಿಜೆಪಿ ಸದಸ್ಯ ಡಿ.ಎನ್‌.ಜೀವರಾಜ್‌ ರಾಜ್ಯ ಸರ್ಕಾರವನ್ನು ಹೀಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆಯಿತು. 

Advertisement

ಬೇಡಿಕೆಗಳ ಮೇಲಿನ ಚರ್ಚೆ ವೇಳೆ ರಾಜ್ಯದ ಅಂಗನವಾಡಿಗಳಲ್ಲಿನ ಸ್ಥಿತಿಗತಿ ಕುರಿತು ಬೆಳಕು ಚೆಲ್ಲಿದ ಜೀವರಾಜ್‌ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮತ್ತು ಉತ್ತಮ ಆರೋಗ್ಯ ನೀಡಲು ಸರ್ಕಾರ ಯೋಜನೆಗಳನ್ನು ರೂಪಿಸಬೇಕು. ಅವರಲ್ಲಿ ರಾಷ್ಟ್ರೀಯತೆ, ಒಗ್ಗಟ್ಟು ಮತ್ತು ದೇಶಭಕ್ತಿ,ಉತ್ತಮ ಸಮಾಜ ನಿರ್ಮಾಣದ ಗುಣಗಳನ್ನು ಬೆಳೆಸಬೇಕು. 

ಆದರೆ, ರಾಜ್ಯ ಸರ್ಕಾರ ಬಡವರು ಮತ್ತು ಶ್ರೀಮಂತರ ಮಕ್ಕಳ ಅಂತರ ಕಡಿಮೆ ಮಾಡುವ ಅಂಗನವಾಡಿ ಕೇಂದ್ರಗಳಲ್ಲಿ ಇದೀಗ ಜಾತಿ ವೈಷಮ್ಯ ಬಿತ್ತುವ ಕೆಲಸ ಮಾಡುತ್ತಿದೆ. ಇಲ್ಲಿಯೂ ವೋಟಿನ ರಾಜಕಾರಣ ಮಾಡುತ್ತಿದೆ. ಅಂಗನವಾಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ವಾರಕ್ಕೆ 5 ಮೊಟ್ಟೆ ಮತ್ತು ಉಳಿದ ಜಾತಿಯ ಮಕ್ಕಳಿಗೆ 2 ಮೊಟ್ಟೆ ಕೊಡಲು ಹೊರಟಿದೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಜಾತಿ ವೈಷಮ್ಯ ಬೆಳೆಯುತ್ತದೆ ಕೂಡಲೇ ಇದನ್ನು ಹಿಂದಕ್ಕೆ ಪಡೆದು ಸಮಾನವಾಗಿ ಅಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next