Advertisement

Supreme Court ತಪರಾಕಿ: ಬಂಧನದ ವಿರುದ್ಧದ ಮನವಿ ಹಿಂಪಡೆದ ಹೇಮಂತ್ ಸೊರೇನ್!

03:58 PM May 22, 2024 | Team Udayavani |

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ನಿಯಮಿತ ಜಾಮೀನು ಅರ್ಜಿ ಸಲ್ಲಿಸುವ ಕುರಿತು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಸುಪ್ರೀಂ ಕೋರ್ಟ್ ಬುಧವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಮಾಡಿದ ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸೊರೇನ್ ಹಿಂಪಡೆದಿದ್ದಾರೆ.

Advertisement

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮ ಅವರ ರಜಾಕಾಲದ ಪೀಠ ಸೊರೇನ್ ಅವರ ವಕೀಲ ಕಪಿಲ್ ಸಿಬಲ್ ಅವರಿಗೆ ಮನವಿಯನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತು. ನ್ಯಾಯಾಲಯವು ಪ್ರಕರಣದ ವಿವರಗಳಿಗೆ ಹೋದರೆ ಅದು ಮಾಜಿ ಮುಖ್ಯಮಂತ್ರಿಗೆ “ಹಾನಿಕಾರಕ” ಎಂದು ಎಚ್ಚರಿಸಿದೆ.

“ನಿಮ್ಮ ನಡವಳಿಕೆಯು ಬಹಳಷ್ಟು ಹೇಳುತ್ತದೆ. ನಿಮ್ಮ ಕಕ್ಷಿದಾರರು ಪ್ರಾಮಾಣಿಕತೆಯೊಂದಿಗೆ ಬರುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ ಆದರೆ ನೀವು ವಸ್ತು ಸಂಗತಿಗಳನ್ನು ಹತ್ತಿಕ್ಕಿದ್ದೀರಿ,ನಿಮ್ಮ ನಡವಳಿಕೆಯು ಕಳಂಕರಹಿತವಾಗಿಲ್ಲ ”ಎಂದು ಪೀಠವು ಸಿಬಲ್‌ಗೆ ತಿಳಿಸಿದೆ.

”ಸೊರೇನ್ ಅವರು ಬಂಧನದಲ್ಲಿದ್ದಾರೆ ಮತ್ತು ನ್ಯಾಯಾಲಯಗಳಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ” ಎಂದು ಸಮರ್ಥಿಸಲು ಸಿಬಲ್ ಪ್ರಯತ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next