Advertisement

ತ್ರಿಪುರ ಎನ್‌ಆರ್‌ಸಿ: ಕೇಂದ್ರ ಉತ್ತರ ಕೋರಿದ ಸುಪ್ರೀಂ ಕೋರ್ಟ್‌

11:51 AM Oct 08, 2018 | Team Udayavani |

ಹೊಸದಿಲ್ಲಿ : ತ್ರಿಪುರದಲ್ಲಿ ಅಕ್ರಮ ವಲಸಿಗರನ್ನು ಗುರುತಿಸುವ ಸಲುವಾಗಿ ನ್ಯಾಶನಲ್‌ ರಿಜಸ್ಟರ್‌ ಫಾರ್‌ ಸಿಟಿಜನ್ಸ್‌ (ಎನ್‌ಆರ್‌ಸಿ) ಉಪಕ್ರಮವನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಇಂದು ಸೋಮವಾರ ಕೇಂದ್ರ ಸರಕಾರದ ಉತ್ತರ ಕೋರಿದೆ. 

Advertisement

ತ್ರಿಪುರದಲ್ಲಿ ಎನ್‌ಆರ್‌ಸಿ ನಡೆಯಬೇಕೆಂದು ಕೋರಿ ತ್ರಿಪುರ ಪೀಪಲ್ಸ್‌ ಫ್ರಂಡ್‌ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲು ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ಜಸ್ಟಿಸ್‌ ಗಳಾದ ಎಸ್‌ ಕೆ ಕೌಲ್‌ ಮತ್ತು ಕೆ ಎಂ ಜೋಸೆಫ್ ಅವರನ್ನು ಒಳಗೊಂಡ ಪೀಠವು ಒಪ್ಪಿಕೊಂಡಿದೆ. 

ಕಳೆದ ಜು.30ರಂದು ಕೇಂದ್ರ ಸರಕಾರ ಅಸ್ಸಾಂ ಎನ್‌ಆರ್‌ಸಿಯ ಎರಡನೇ ಕರಡನ್ನು ಪ್ರಕಟಿಸಿತ್ತು. ಅದರಲ್ಲಿ 3.29 ಕೋಟಿ ಜನರ ಪೈಕಿ 2.89 ಕೋಟಿ ಜನರನ್ನು ಸೇರಿಸಲಾಗಿತ್ತು. ಮೊದಲ ಅಸ್ಸಾಂ ಎನ್‌ಆರ್‌ಸಿಯನ್ನು ಕಳೆದ ವರ್ಷ ಡಿ.31 ಮತ್ತು ಜನವರಿ 1ರ ನಡುವಿನ ರಾತ್ರಿ ಪ್ರಕಟಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next