Advertisement

VVPAT ಎಣಿಕೆಗೆ ವಿಪಕ್ಷ ನಾಯಕರ ಆಗ್ರಹ: ಮಾ.25ಕ್ಕೆ ಸುಪ್ರೀಂ ವಿಚಾರಣೆ

06:54 AM Mar 15, 2019 | Team Udayavani |

ಹೊಸದಿಲ್ಲಿ : ಲೋಕಸಭಾ ಚುನಾವಣಾ ಫ‌ಲಿತಾಂಶ ಪ್ರಕಟಿಸುವ ಮುನ್ನ ಪ್ರತಿಯೊಂದು ಕ್ಷೇತ್ರ ವಿದ್ಯುನ್ಮಾನ ಮತಯಂತ್ರಗಳ ಶೇ.50ರಷ್ಟು ವಿಪಿಪ್ಯಾಟ್‌ ಸ್ಲಿಪ್‌ ಗಳ (Voter Verifiable Paper Audit Trail) ಎಣಿಕೆಯನ್ನು ಮಾಡುವಂತೆ ವಿರೋಧ ಪಕ್ಷಗಳ ನಾಯಕರ ಕೋರಿಕೆಗೆ ಸಂಬಂಧಿಸಿ ಉತ್ತರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಶುಕ್ರವಾರ ಚುನಾವಣಾ ಆಯೋಗಕ್ಕೆ ನೊಟೀಸ್‌ ಜಾರಿ ಮಾಡಿದೆ.

Advertisement

ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ಜಸ್ಟಿಸ್‌ ದೀಪಕ್‌ ಗುಪ್ತಾ ಹಾಗೂ ಜಸ್ಟಿಸ್‌ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ಪೀಠವು ವಿಪಕ್ಷ ನಾಯಕರ ಮನವಿಯ ವಿಚಾರಣೆಯನ್ನು ಮಾರ್ಚ್‌ 25ಕ್ಕೆ ನಿಗದಿಸಿದೆ. ಈ ವಿಷಯದಲ್ಲಿ ಕೋರ್ಟಿಗೆ ನೆರವಾಗುವುದಕ್ಕಾಗಿ ಓರ್ವ ಅಧಿಕಾರಿಯನ್ನು ಕಳುಹಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ. 

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಹಲವಾರು ವಿಪಕ್ಷ ನಾಯಕರು ವಿವಿಪ್ಯಾಟ್‌ ಸ್ಲಿಪ್‌ ಗಳ ಎಣಿಕೆಯನ್ನು ಆಗ್ರಹಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next