Advertisement
ವರದಕ್ಷಿಣೆ ಕಿರುಕುಳ ಕುರಿತು ದೂರು ಬಂದ ಕೂಡಲೇ ಸಂತ್ರಸ್ತೆಯ ಪತಿ ಹಾಗೂ ಸಂಬಂಧಿಕರನ್ನು ಬಂಧಿಸಬಾರದು ಹಾಗೂ ದೂರಿನ ಬಗ್ಗೆ ಪರಿಶೀಲಿಸಲು ಕುಟುಂಬ ಕಲ್ಯಾಣ ಸಮಿತಿಯನ್ನು ಜಿಲ್ಲಾ ಮಟ್ಟದಲ್ಲಿ ರಚಿಸಬೇಕು ಎಂದು 2017ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಈ ಹಿಂದಿನ ಆದೇಶವು ವರದಕ್ಷಿಣೆ ಕಿರುಕುಳ ತಡೆ ಕಾನೂನನ್ನು ದುರ್ಬಲಗೊಳಿಸಿದ್ದು, ಅದನ್ನು ಮಾರ್ಪಾಡು ಮಾಡಬೇಕು ಎಂದು ಕೋರಿ ಸೋಷಿಯಲ್ ಆ್ಯಕ್ಷನ್ ಫೋರಂ ಎಂಬ ಎನ್‌ಜಿಒ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಪುರಸ್ಕರಿಸಿರುವ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ, ಶುಕ್ರವಾರ ತೀರ್ಪಿನಲ್ಲಿ ಮಾರ್ಪಾಡು ಮಾಡಿದೆ. ದೂರು ಬಂದ ಕೂಡಲೇ ಸಂತ್ರಸ್ತೆಯ ಪತಿ, ಸಂಬಂಧಿಕರ ಬಂಧನಕ್ಕೆ ಇದ್ದ ಅಡ್ಡಿಯನ್ನು ತೆಗೆದುಹಾಕಲಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ, ದೂರು ಪರಿಶೀಲಿಸಲು ಸಮಿತಿಯ ಅಗತ್ಯವಿಲ್ಲ ಎಂದೂ ಹೇಳಿದೆ. ಇದೇ ವೇಳೆ, ಬಂಧಿತರು ಜಾಮೀನಿಗಾಗಿ
ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು, ಅವರಿಗೆ ಜಾಮೀನು ನೀಡುವುದು ಆಯಾ ಮ್ಯಾಜಿಸ್ಟ್ರೇಟ್‌ರ ವಿವೇಚನೆಗೆ ಬಿಟ್ಟಿದ್ದು ಎಂದೂ ಹೇಳಿದೆ.