Advertisement

ಎನ್ ಎಲ್ ಎಟಿ-2020 ಪ್ರವೇಶ ಪರೀಕ್ಷೆ ಅಧಿಸೂಚನೆ ರದ್ದುಪಡಿಸಿದ ಸುಪ್ರೀಂಕೋರ್ಟ್

01:59 PM Sep 21, 2020 | Nagendra Trasi |

ನವದೆಹಲಿ: ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿ (ಎನ್ ಎಲ್ ಎಸ್ ಐಯು) ಸೆಪ್ಟೆಂಬರ್ 12ರಂದು ನಡೆಸಿದ್ದ ನ್ಯಾಷನಲ್ ಲಾ ಆಪ್ಟಿಟ್ಯೂಡ್ ಪರೀಕ್ಷೆ-2020 ಇದರ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಸೋಮವಾರ(ಸೆಪ್ಟೆಂಬರ್ 21, 2020) ಸುಪ್ರೀಂಕೋರ್ಟ್ ರದ್ದುಪಡಿಸಿದೆ.

Advertisement

ಐದು ವರ್ಷಗಳ ಸಂಯೋಜಿತ ಬಿಎ ಎಲ್ ಎಲ್ ಬಿ ಪದವಿ ಪ್ರವೇಶದ ಎನ್ ಎಲ್ ಎಟಿ-2020 ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ಸೆಪ್ಟೆಂಬರ್ 28ರಂದು ಬೆಂಗಳೂರಿನ ಎನ್ ಎಲ್ ಎಸ್ ಐಯು ಸೇರಿದಂತೆ ದೇಶಾದ್ಯಂತ ಇರುವ 22 ರಾಷ್ಟ್ರೀಯ ಕಾನೂನು ವಿವಿಗಳಲಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ ಟಿ-2020) ಪ್ರಕಾರವೇ ಪ್ರವೇಶ ಪರೀಕ್ಷೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಈ ಸಂದರ್ಭದಲ್ಲಿ ನಿರ್ದೇಶಿಸಿದೆ.

ಎನ್ ಎಲ್ ಎಟಿ ನಿರ್ಧಾರ ಪ್ರಶ್ನಿಸಿ ಎನ್ ಎಲ್ ಎಸ್ ಐಯು ಮಾಜಿ ಉಪಕುಲಪತಿ ಪ್ರೊ.ಆರ್.ವೆಂಕಟರಾವ್ ಮತ್ತು ಪ್ರವೇಶ ಪರೀಕ್ಷೆ ಆಕಾಂಕ್ಷಿಗಳ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಅಶೋಕ್ ಭೂಷಣ್ ನೇತೃತ್ವದ ಪೀಠ ಈ ಆದೇಶವನ್ನು ನೀಡಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಮಾರಾಮಾರಿಗೆ ಮುಂದಾದ ಬಿಜೆಪಿ ನಾಯಕರು: ಕಮಲ ಪಾಳಯದ ಒಳಜಗಳ ಸ್ಪೋಟ!

ಅಷ್ಟೇ ಅಲ್ಲ ಜಸ್ಟೀಸ್ ಆರ್ ಎಸ್ ರೆಡ್ಡಿ ಮತ್ತು ಜಸ್ಟೀಸ್ ಎಂಆರ್ ಶಾ ಅವರನ್ನೊಳಗೊಂಡ ಪೀಠ, ಎಲ್ಲಾ ಎನ್ ಎಲ್ ಯುಗಳು ಅಕ್ಟೋಬರ್ ಮಧ್ಯಂತರದಿಂದಲೇ ಶೈಕ್ಷಣಿಕ ಚಟುವಟಿಕೆ ಪುನರಾರಂಭಿಸುವಂತೆ ಸೂಚಿಸಿದೆ.

Advertisement

ಎನ್ ಎಲ್ ಎಟಿ-2020 ಅಧಿಸೂಚನೆ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಪೀಠ ಸೆಪ್ಟೆಂಬರ್ 17ರಂದು ಆದೇಶವನ್ನು ಕಾಯ್ದಿರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next