Advertisement

ನಾಳೆ ಬಿಎಸ್ ವೈಗೆ ಅಗ್ನಿಪರೀಕ್ಷೆ; ಸುಪ್ರೀಂ ತೀರ್ಪಿನಲ್ಲೇನಿದೆ?

12:10 PM May 18, 2018 | Sharanya Alva |

ನವದೆಹಲಿ:ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ವಿಧಾನಸಭೆಯಲ್ಲಿ ಶನಿವಾರ ಸಂಜೆ 4ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ತೀರ್ಪು ನೀಡಿದೆ.

Advertisement

ಅಲ್ಲದೇ ವಿಶ್ವಾಸಮತ ಯಾಚನೆಗೂ ಮುನ್ನ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸುವಂತೆ ಆದೇಶ ಕೊಟ್ಟಿದೆ.

ಸುಪ್ರೀಂ ತೀರ್ಪಿನಲ್ಲಿದೆ:

ಬಿಎಸ್ ಯಡಿಯೂರಪ್ಪ ಯಾವುದೇ ಆಡಳಿತಾತ್ಮಕ ನಿರ್ಣಯ ಕೈಗೊಳ್ಳಬಾರದು. ಅಲ್ಲದೇ ಸದನದ ಹಿರಿಯ ಶಾಸಕರೊಬ್ಬರನ್ನು ಹಂಗಾಮಿ ಸ್ಪೀಕರ್ ಅನ್ನು ಆಯ್ಕೆ ಮಾಡಬೇಕೆಂದು ನ್ಯಾ.ಎಕೆ ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಯಡಿಯೂರಪ್ಪ ನಾಳೆಯೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು. ನಾವು ಯಾರಿಗೂ ಸಮಯಾವಕಾಶ ಕೊಡೋದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Advertisement

ನ್ಯಾ.ಎಕೆ ಸಿಕ್ರಿ ಅಭಿಪ್ರಾಯ ಅರ್ಜಿದಾರರಿಗೆ ಎರಡು ಆಯ್ಕೆಗಳನ್ನು ನೀಡಿದ ಸುಪ್ರೀಂ. ರಾಜ್ಯಪಾಲರ ನಿರ್ಣಯದ ಬಗ್ಗೆ ವಿಸ್ತೃತ ವಿಚಾರಣೆ ಬೇಕೆ, ಮತ್ತೊಂದು ನಾಳೆಯೇ ವಿಶ್ವಾಸ ಮತಯಾಚನೆಗೆ ಸೂಚಿಸಬೇಕೆ? ಎಂದು ಪ್ರಶ್ನಿಸಿತ್ತು.

ವಿಶ್ವಾಸಮತ ಯಾಚನೆ ವೇಳೆ ನಿರ್ಭಯವಾಗಿ ಮತ ಚಲಾಯಿಸಲು ಸೂಕ್ತ ವ್ಯವಸ್ಥೆ ಮಾಡುತ್ತೇವೆ. ಎಲ್ಲಾ ಶಾಸಕರಿಗೂ ಸೂಕ್ತ ರಕ್ಷಣೆ ಕೊಡುತ್ತೇವೆ. ಎಲ್ಲಾ ಶಾಸಕರೂ ಸದನದಲ್ಲಿ ಹಾಜರಿರುವಂತೆ ಡಿಜಿಪಿಗೆ ಆದೇಶ ನೀಡುತ್ತೇವೆ. ಸೂಕ್ತ ಭದ್ರತೆ ನೀಡಲು ಆದೇಶ ನೀಡುತ್ತೇವೆ ಎಂದು ತ್ರಿಸದಸ್ಯ ಪೀಠ ಹೇಳಿದೆ.

ನಾಳೆಯೇ ವಿಶ್ವಾಸಮತ ಯಾಚನೆಗೆ ಬಿಜೆಪಿ ಪರ ವಕೀಲರಾದ ರೋಹ್ಟಗಿ ಅಸಮ್ಮತಿ ಸೂಚಿಸಿದಾಗಿ, ಇನ್ನೂ ಹೆಚ್ಚಿನ ಸಮಯಾವಕಾಶ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ತ್ರಿಸದಸ್ಯ ಪೀಠ ತಿಳಿಸಿದ್ದು, ನಾಳೆ ಸಂಜೆ 4ಗಂಟೆಗೆ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಸೂಚನೆ ನೀಡಿದೆ.

ವಿಶ್ವಾಸಮತ ಹೇಗೆ ನಡೆಸಬೇಕೆಂದು ಹಂಗಾಮಿ ಸ್ಪೀಕರ್ ನಿರ್ಧರಿಸಲಿ. ಗೌಪ್ಯ ಮತದಾನದ ಮನವಿಯನ್ನೂ ಸುಪ್ರೀಂ ತಿರಸ್ಕರಿಸಿ, ಈ ಬಗ್ಗೆ ಸ್ಪೀಕರ್ ನಿರ್ಧರಿಸಲಿ ಎಂದು ತ್ರಿಸದಸ್ಯ ಪೀಠ ತಿಳಿಸಿದೆ.

ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಜೆಡಿಎಸ್ ಪರ ಕಪಿಲ್ ಸಿಬಲ್ ಹಾಗೂ ಬಿಜೆಪಿ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next