Advertisement

ಯುಪಿ ಪಿಎಸ್‌ಸಿ ಮುಖ್ಯ ಪರೀಕ್ಷೆಗೆ ತಡೆ ನೀಡಲು ಸುಪ್ರಿಂ ನಿರಾಕರಣೆ

11:34 AM Jun 14, 2018 | Team Udayavani |

ಹೊಸದಿಲ್ಲಿ : ಯುಪಿ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ನ ಇದೇ ಜೂನ್‌ 18ರಂದು ನಡೆಯಲಿರುವ ಮುಖ್ಯ ಪರೀಕ್ಷೆಗೆ ತಡೆ ನೀಡಲು ಸರ್ವೋಚ್ಚ ನಾಯಾಲಯ ಇಂದು  ನಿರಾಕರಿಸಿತು. ಮಾತ್ರವಲ್ಲದೆ ಪ್ರಿಲಿಮಿನರಿ ಟೆಸ್ಟ್‌ ನ ಉತ್ತರ ಪತ್ರಿಕೆಗಳ ಪುನರ್‌ಮೌಲ್ಯಮಾಪನಕ್ಕೆ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು. 

Advertisement

ಯುಪಿ ಪಿಎಸ್‌ಸಿ ವಿಷಯಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ರಜಕಾಲದ ಪೀಠದ ನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಮತ್ತು ದೀಪಕ್‌ ಗುಪ್ತಾ ಅವರು ವಿಚಾರಣೆಗೆ ಎತ್ತಿಕೊಂಡರು. 

ಯುಪಿ ಪಿಎಸ್‌ಸಿ, ಹೈಕೋರ್ಟ್‌ ಆದೇಶವನ್ನು ಪರಿಪಾಲಿಸಿಲ್ಲವಾದ ಕಾರಣ ಇದೇ ಜೂನ್‌ 18ರಂದು ನಡೆಯಲಿರುವ ಮುಖ್ಯ ಪರೀಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕೆಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿಯನ್ನು ರಜಾ ಕಾಲದ ಸುಪ್ರೀಂ ಪೀಠ ವಜಾ ಮಾಡಿತು. 

Advertisement

Udayavani is now on Telegram. Click here to join our channel and stay updated with the latest news.

Next