ನವದೆಹಲಿ:ಕಾಶಿ ವಿಶ್ವನಾಥ ಮಂದಿರದ ಸಮೀಪದ ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ಸಂಕೀರ್ಣದ ಹೊರಗೆ ಮತ್ತು ಒಳಗೆ ವಿಡಿಯೋ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸುವಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ (ಮೇ 13) ತಿಳಿಸಿದೆ.
ಇದನ್ನೂ ಓದಿ:ಧರ್ಮ ಜನರ ಹೊಟ್ಟೆ ತುಂಬಿಸಲ್ಲ, ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು: ದಿನೇಶ್ ಗುಂಡೂರಾವ್
ಮತ್ತೊಂದೆಡೆ ಜ್ಞಾನವಾಪಿ ಮಸೀದಿ ಆವರಣದೊಳಗೆ ಸರ್ವೇ ನಡೆಸಲು ವಾರಾಣಸಿ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಮುಸ್ಲಿಮ್ ಮಂಡಳಿ ಸಲ್ಲಿಸಿದ ಅರ್ಜಿಯ ವಿಚಾರಣೆಗಾಗಿ ಲಿಸ್ಟಿಂಗ್ ಮಾಡಲು ಸುಪ್ರೀಂಕೋರ್ಟ್ ಸಮ್ಮತಿಸಿರುವುದಾಗಿ ವರದಿ ಹೇಳಿದೆ.
ಜ್ಞಾನವಾಪಿ ಮಸೀದಿ ಕುರಿತ ಪ್ರಕರಣದ ಬಗ್ಗೆ ನಮಗೆ ಏನೂ ತಿಳಿದಿಲ್ಲ, ನಾನು ಹೇಗೆ ಮಧ್ಯಂತರ ಆದೇಶ ಹೊರಡಿಸಲು ಸಾಧ್ಯ. ನಾವು ಈ ಬಗ್ಗೆ ತಿಳಿದುಕೊಳ್ಳುತ್ತೇವೆ ಎಂದು ಸುಪ್ರೀಂಕೋರ್ಟ್ ಸಿಜೆಐ ಮುಸ್ಲಿಂ ಮಂಡಳಿ ಪರ ವಕೀಲರಿಗೆ ತಿಳಿಸಿದ್ದಾರೆ.
ಮುಸ್ಲಿಂ ಮಂಡಳಿ ಪರವಾಗಿ ಹಿರಿಯ ವಕೀಲೆ ಹುಝೆಫಾ ಅಹ್ಮದಿ ಸುಪ್ರೀಂಕೋರ್ಟ್ ಗೆ ಹಾಜರಾಗಿದ್ದರು. ಜ್ಞಾನವಾಪಿ ಪ್ರಕರಣದ ಅರ್ಜಿಯನ್ನು ಶೀಘ್ರವಾಗಿ ಲಿಸ್ಟಿಂಗ್ ಮಾಡಬೇಕೆ ಎಂಬ ಬಗ್ಗೆ ಮುಂದೆ ನೋಡುವಾ ಎಂದು ಸಿಜೆಐ ಎನ್ ವಿ ರಮಣ್ ತಿಳಿಸಿದ್ದಾರೆ.
ಗುರುವಾರ ವಾರಾಣಸಿ ಸ್ಥಳೀಯ ಕೋರ್ಟ್, ಜ್ಞಾನವಾಪಿ ಶ್ರೀನಗರ್ ಗೌರಿ ಸಂಕೀರ್ಣದೊಳಗೆ ವಿಡಿಯೋ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ನೇಮಕಗೊಂಡಿರುವ ಅಡ್ವೋಕೇಟ್ ಕಮಿಷನರ್ ಅವರನ್ನು ಬದಲಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಮೇ 17ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡುವಂತೆ ತಿಳಿಸಿತ್ತು.