ಹೊಸದಿಲ್ಲಿ: 2014ರಲ್ಲಿ ಮಧ್ಯಪ್ರದೇಶದ ಉಚ್ಚ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ, ಕೆಲಸಕ್ಕೆ ರಾಜೀನಾಮೆ ನೀಡಿದ್ದ ಮಹಿಳಾ ನ್ಯಾಯಾಧೀಶೆ ಪರ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.
ಗ್ವಾಲಿಯರ್ ಮಹಿಳಾ ನ್ಯಾಯಾಧೀಶೆಯಾಗಿದ್ದವ ರು ಬೇರೆ ದಾರಿ ಕಾಣದೇ ಬಲವಂತಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ, ಆದ್ದರಿಂದ ಅವರಿಗೆ ಮರಳಿ ಜವಾಬ್ದಾರಿ ನೀಡಬೇಕೆಂದು ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ವಾದಿಸಿದ್ದರು.
ಇದನ್ನು ಮಾನ್ಯ ಮಾಡಿದ ಸರ್ವೋಚ್ಚ ಪೀಠ, ಮಹಿಳೆಯ ರಾಜೀನಾಮೆಯನ್ನು ಸ್ವಪ್ರೇರಿತ ಎಂದು ಪರಿಗಣಿಸಿ 2014, ಜು.17ರಂದು ಉಚ್ಚ ನ್ಯಾಯಪೀಠ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ.
ಇದನ್ನೂ ಓದಿ:ಸಮವಸ್ತ್ರ ನೀತಿ ಧಿಕ್ಕರಿಸುವುದು ಸರಿಯಲ್ಲ: ಸಚಿವ ಸಿ.ಸಿ.ಪಾಟೀಲ್
ಬದಲಿಗೆ ಮಹಿಳೆಯನ್ನು ಮತ್ತೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಿಸಬೇಕು ಎಂದು ಆದೇಶಿಸಿದೆ. ಅಷ್ಟು ಮಾತ್ರವಲ್ಲ, 2014, ಜು.15ರಿಂದ ಅವರು ಕೆಲಸದಲ್ಲಿ ಮುಂದುವರಿದಿದ್ದಾರೆ ಎಂದು ಪರಿಗಣಿಸಬೇಕು. ಆ ಹೊತ್ತಿಗಿನ ಎಲ್ಲ ಸೌಲಭ್ಯಗಳನ್ನೂ ನೀಡಬೇಕು ಎಂದು ಆದೇಶಿಸಿದೆ.