Advertisement

ಬ್ಲೂವೇಲ್ ಚಾಲೆಂಜ್ ತರಹದ ಗೇಮ್ ನಿಷೇಧ ಅಸಾಧ್ಯ: ಸುಪ್ರೀಂಗೆ ಕೇಂದ್ರ

02:37 PM Nov 20, 2017 | Team Udayavani |

ನವದೆಹಲಿ:ಬ್ಲೂವೇಲ್ ಚಾಲೆಂಜ್ ತರಹದ ಗೇಮ್ ನಿಷೇಧ ಅಸಾಧ್ಯ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಇದು ಆಪ್ ಮೂಲದ ಗೇಮ್ಸ್ ಅಲ್ಲ, ಆ ನಿಟ್ಟಿನಲ್ಲಿ ಇಂತಹ ಗೇಮ್ ನಿಷೇಧ ಅಸಾಧ್ಯ ಎಂದು ಹೇಳಿದೆ. 

Advertisement

ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡುವ ರಷ್ಯಾ ಮೂಲದ ಅಪಾಯಕಾರಿ ಅನ್ ಲೈನ್ ಆಟವಾಗಿರುವ ‘ಬ್ಲೂವೇಲ್ ಚಾಲೆಂಜ್’ ಗೇಮ್ ಬಗ್ಗೆ ವಿದ್ಯಾರ್ಥಿಗಳು ಸೇರಿದಂತೆ ಯುವ ಸಮೂಹಕ್ಕೆ ಅರಿವು ಮೂಡಿಸಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.

ಬ್ಲೂವೇಲ್ ಗೇಮ್ ಗೆ ಕಡಿವಾಣ ಹಾಕುವುದಾಗಲಿ, ನಿಷೇಧಿಸಲುವುದಾಗಲಿ ಸಾಧ್ಯವಿಲ್ಲ, ಇದಕ್ಕೆ ಯಾವುದೇ URL ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next