Advertisement

‘ಭೋಬಿಶೋಟರ್‌ ಭೂತ್‌’ಚಿತ್ರ ನಿಷೇಧ: ಪ.ಬಂ. ಸರಕಾರಕ್ಕೆ ಸುಪ್ರೀಂ 20 ಲಕ್ಷ ರೂ. ದಂಡ

09:45 AM Apr 12, 2019 | Sathish malya |

ಹೊಸದಿಲ್ಲಿ : ‘ಭೋಬಿಶೋಟರ್‌ ಭೂತ್‌’ ಎಂಬ ವ್ಯಂಗ್ಯಭರಿತ ಚಿತ್ರದ ಮೇಲೆ ವಸ್ತುತಃ ನಿಷೇಧ ಹೇರಿದ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಪಶ್ಚಿಮ ಬಂಗಾಲ ಸರಕಾರದ ಮೇಲೆ 20 ಲಕ್ಷ ರೂ. ದಂಡ ಹೇರಿದೆ.

Advertisement

ಪಶ್ಚಿಮ ಬಂಗಾಲ ಸರಕಾರ ಚಿತ್ರದ ನಿರ್ಮಾಪಕ ಮತ್ತು ಸಿನೇಮಾ ಹಾಲ್‌ ಮಾಲಕರಿಗೆ 20 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದಿರುವ ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ನೇತೃತ್ವದ ಸುಪ್ರೀಂ ಪೀಠ, ಚಿತ್ರದ ಮೇಲೆ ವಸ್ತುತಃ ನಿಷೇಧ ಹೇರುವ ಮೂಲಕ ಪ.ಬಂಗಾಲ ಸರಕಾರ ಅವರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಮಾಡಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿತು.

ತನ್ನ ಚಿತ್ರವನ್ನು ರಾಜ್ಯಾಡಳಿತೆಯ ಕುಮ್ಮಕ್ಕಿನಿಂದಾಗಿ ಹೆಚ್ಚಿನೆಲ್ಲ ಸಿನೆಮಾ ಮಂದಿರಗಳಿಂದ ಎತ್ತಂಗಡಿ ಮಾಡಲಾಯಿತು ಎಂದು ದೂರಿ ಚಿತ್ರದ ನಿರ್ಮಾಪಕರು ಸುಪ್ರೀಂ ಮೆಟ್ಟಲೇರಿದ್ದರು.

ಇದಕ್ಕೆ ಮೊದಲು ಮಾರ್ಚ್‌ 15ರಂದು ಸುಪ್ರೀಂ ಕೋಟ್‌ರ ಮಮತಾ ಬ್ಯಾನರ್ಜಿ ಸರಕಾರಕ್ಕೆ “ಈ ಚಿತ್ರದ ಪ್ರದರ್ಶನಕ್ಕೆ ಯಾವುದೇ ತಡೆ ಅಥವಾ ನಿರ್ಬಂಧ ಒಡ್ಡಬಾರದು’ ಎಂದು ಆದೇಶಿಸಿತ್ತು. ಆದರೂ ಪಶ್ಚಿಮ ಬಂಗಾಲ ಸರಕಾರ ಅದಕ್ಕೆ ಡೋಂಟ್‌ ಕೇರ್‌ ಎಂಬ ರೀತಿಯಲ್ಲಿ ವರ್ತಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next