Advertisement

Supreme Court 40 ವರ್ಷದ ಬಳಿಕ ಸಿಕ್ಕಿತು 75ರ ವ್ಯಕ್ತಿಗೆ ಜಾಮೀನು!

11:35 PM Sep 28, 2023 | Shreeram Nayak |

ನವದೆಹಲಿ: 1983ರಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧಿಸಿದಂತೆ ಆರೋಪಕ್ಕೆ ಗುರಿಯಾಗಿ, ಇತ್ತೀಚೆಗೆ ದೋಷಿ ಎಂದು ಪ್ರಕಟಿಸಲ್ಪಟ್ಟ ಪ್ರಸಕ್ತ 75ರ ವಯಸ್ಸಿನ ವ್ಯಕ್ತಿಯೊಬ್ಬರಿಗೆ 40 ವರ್ಷಗಳ ಸುದೀರ್ಘ‌ ವಿಚಾರಣೆ ಬಳಿಕ ಸುಪ್ರೀಂಕೋರ್ಟ್‌ ಜಾಮೀನು ನೀಡಿದೆ.

Advertisement

1983ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ, ನೇಣುಹಾಕಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ 4 ದಶಕಗಳಿಂದಲೂ ವಿಚಾರಣೆ ನಡೆಸಲಾಗುತ್ತಿತ್ತು. ಏಪ್ರಿಲ್‌ 21, 2023ರಂದು ಕಲ್ಕತ್ತಾ ಹೈಕೋರ್ಟ್‌ ಪ್ರಕರಣದಲ್ಲಿ ವ್ಯಕ್ತಿಯನ್ನು ದೋಷಿ ಎಂದು ಪರಿಗಣಿಸಿತ್ತು. ಬಳಿಕ ವ್ಯಕ್ತಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ ನಿರಾಕರಿಸಿದ ಕಾರಣ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಗುರುವಾರ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ಅವರ ನ್ಯಾಯಪೀಠವು ಅರ್ಜಿ ಆಲಿಸಿ ವ್ಯಕ್ತಿಗೆ ಜಾಮೀನು ನೀಡಿದೆ. ಇದೇ ವೇಳೆ ಹೈಕೋರ್ಟ್‌ನ ದೋಷಿ ಎನ್ನುವ ತೀರ್ಪನ್ನು ಪ್ರಶ್ನಿಸಿಯೂ ವ್ಯಕ್ತಿ ಅರ್ಜಿ ಸಲ್ಲಿಕೆ ಮಾಡಿರುವುದನ್ನು ನ್ಯಾಯಪೀಠ ಗಮನಿಸಿದೆ. ಪ್ರಕರಣ ಈಗಾಗಲೇ 40 ವರ್ಷಗಳ ಸುದೀರ್ಘ‌ ವಿಚಾರಣೆಗೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಅರ್ಜಿಯನ್ನು ಇತ್ಯರ್ಥಗೊಳಿಸುವಂತೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next