Advertisement

ರಾಷ್ಟ್ರೀಯ ಭಾಷೆಯಾಗಿ ಸಂಸ್ಕೃತ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

01:21 PM Sep 02, 2022 | Team Udayavani |

ಹೊಸದಿಲ್ಲಿ: ಸಂಸ್ಕೃತವನ್ನು ಭಾರತದ ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ವಿಚಾರವನ್ನು ಚರ್ಚೆ ಮಾಡಲು ನ್ಯಾಯಾಲಯ ಸರಿಯಾದ ವೇದಿಕೆಯಲ್ಲ ಎಂದು ಪೀಠ ಹೇಳಿದೆ.

Advertisement

“ನೀವು ನಿಮ್ಮ ಪ್ರಾರ್ಥನೆಯನ್ನು ಸಂಸ್ಕೃತದಲ್ಲಿ ರಚಿಸುತ್ತೀರಿ. ನಾವು ಏಕೆ ನೋಟೀಸ್ ಅಥವಾ ಘೋಷಣೆ ಮಾಡಬೇಕು? ಪ್ರಚಾರಕ್ಕಾಗಿಯೇ? ನಿಮ್ಮ ಕೆಲವು ಅಭಿಪ್ರಾಯಗಳನ್ನು ನಾವು ಹಂಚಿಕೊಳ್ಳಬಹುದು, ಆದರೆ ಈ ಬಗ್ಗೆ ಚರ್ಚೆ ನಡೆಸಲು ಸರಿಯಾದ ವೇದಿಕೆ ಸಂಸತ್ತು. ಇದಕ್ಕೆ ಸಂವಿಧಾನದಲ್ಲಿ ತಿದ್ದುಪಡಿಯ ಅಗತ್ಯವಿದೆ” ಎಂದುಸುಪ್ರೀಂ ಕೋರ್ಟ್ ಮನವಿಯನ್ನು ತಿರಸ್ಕರಿಸಿತು.

ಈ ಪಿಐಎಲ್ ಅನ್ನು ಗುಜರಾತ್ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಕೆ.ಜಿ. ವಂಝಾರ ಸಲ್ಲಿಸಿದ್ದರು. ಹಿಂದೂ ಅಧಿಕೃತ ಭಾಷೆಯಾಗಿ ಮುಂದುವರಿಯುವ ಸಂದರ್ಭದಲ್ಲಿ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ:ವೈದ್ಯನಿಗೆ ಬ್ಲ್ಯಾಕ್ ಮೇಲ್: ಮಹಿಳೆಯ ಬಂಧನ; ತಲೆ ಮರೆಸಿಕೊಂಡಿರುವ ಇಬ್ಬರು ವೈದ್ಯರು

“ಸಂಸ್ಕೃತವು ಸಂಸ್ಕೃತದ ಜೈವಿಕ ವೈಜ್ಞಾನಿಕ ಫೋನೆಟಿಕ್ ರಚನೆಯನ್ನು ಹೊಂದಿದೆ, ಇದು ಮೆದುಳು, ಲಯಬದ್ಧ ಉಚ್ಚಾರಣೆ ಮತ್ತು ಮಕ್ಕಳಲ್ಲಿ ಕಂಠಪಾಠ ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ” ಎಂದು ಮನವಿಯಲ್ಲಿ ಹೇಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next