Advertisement

ಈಸ್ಟರ್ನ್ ಕಮಾಂಡ್‌ ಚೀಫ್ ಸುಹಾಗ್‌ ನೇಮಕಾತಿ ಪ್ರಶ್ನಿಸಿದ ಅರ್ಜಿ ವಜಾ

06:12 AM Mar 01, 2019 | udayavani editorial |

ಹೊಸದಿಲ್ಲಿ : 2012ರಲ್ಲಿ ದಲ್‌ಬಿàರ್‌ ಸಿಂಗ್‌ ಸುಹಾಗ್‌ ಅವರನ್ನು ಈಸ್ಟ್‌ರ್ನ್ ಕಮಾಂಡ್‌ ನ ಮುಖ್ಯಸ್ಥರನ್ನಾಗಿ ನೇಮಿಸಲಾದ ಕ್ರಮವನ್ನು ಪ್ರಶ್ನಿಸಿ ನಿವೃತ್ತ ಲೆ| ಜ| ರವಿ ದಸ್ತಾನೆ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಇಂದು ಶುಕ್ರವಾರ ವಜಾ ಮಾಡಿದೆ.

Advertisement

2012ರಲ್ಲಿ ಈಸ್ಟರ್ನ್ ಕಮಾಂಡ್‌ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಸುಹಾಗ್‌ ಅವರು 2014 ಜುಲೈ 31ರಂದು ಜನರಲ್‌ ಬಿಕ್ರಮ್‌ ಸಿಂಗ್‌ ಅವರ ಉತ್ತರಾಧಿಕಾರಿಯಾಗಿ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಜನರಲ್‌ ಸುಹಾಗ್‌ ಅವರು 2016ರ ಡಿ.31ರಂದು ನಿವೃತ್ತರಾಗಿದ್ದರು. 

ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ ಲೆ| ಜ| ದಸ್ತಾನೆ ಅವರ ಅರ್ಜಿಯನ್ನು ವಜಾ ಮಾಡಿತು. 

Advertisement

Udayavani is now on Telegram. Click here to join our channel and stay updated with the latest news.

Next