Advertisement

2019ರ ಚುನಾವಣೆಗೆ ಬ್ಯಾಲಟ್‌ ಪೇಪರ್‌: ಸುಪ್ರೀಂನಿಂದ PIL ವಜಾ

12:30 PM Nov 22, 2018 | Team Udayavani |

ಹೊಸದಿಲ್ಲಿ : ಮುಂಬರುವ ಲೋಕಸಭಾ  ಚುನಾವಣೆಯಲ್ಲಿ  ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬದಲು ಬ್ಯಾಲಟ್‌ ಪೇಪರ್‌ ಗಳನ್ನು ಬಳಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ಗುರುವಾರ ವಜಾ ಮಾಡಿದೆ.

Advertisement

“ಇವಿಎಂ ಗಳ ತಿರುಚುವಿಕೆ, ದುರ್ಬಳಕೆ ಸಾಧ್ಯವಿರುವುದರಿಂದ ಅವುಗಳನ್ನು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಬಳಸಬಾರದು’ ಎಂಬ  ‘ನ್ಯಾಯ ಭೂಮಿ’ ಎನ್‌ಜಿಓ ವಾದವನ್ನು ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸುಪ್ರೀಂ ಪೀಠ ಒಪ್ಪಲಿಲ್ಲ. 

“ಎಲ್ಲ ವ್ಯವಸ್ಥೆಗಳು ಮತ್ತು ಯಂತ್ರಗಳು ದುರ್ಬಳಕೆಗೆ ಪಕ್ಕಾಗಿರುತ್ತವೆ; ಎಲ್ಲ ಕಡೆಯಲ್ಲೂ ಸಂದೇಹಗಳು ಇರುತ್ತವೆ” ಎಂದು ಹೇಳಿದ ಪೀಠ, ಪಿಐಎಲ್‌ ಅರ್ಜಿಯನ್ನು ವಜಾ ಮಾಡಿತು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next