Advertisement

ಅಲ್ಪಸಂಖ್ಯಾಕ ಪದದ ಮರು ವ್ಯಾಖ್ಯಾನ: ಆಯೋಗಕ್ಕೆ ಸುಪ್ರಿಂ ಸೂಚನೆ

06:23 AM Feb 11, 2019 | udayavani editorial |

ಹೊಸದಿಲ್ಲಿ : ಸಮುದಾಯವೊಂದರ ರಾಜ್ಯವಾರು ಜನಸಂಖ್ಯೆಯನ್ನು ಲೆಕ್ಕಿಸಿಕೊಂಡು, “ಅಲ್ಪಸಂಖ್ಯಾಕ’ ಪದದ ಮರು ವ್ಯಾಖ್ಯಾನಕ್ಕೆ  ಮಾರ್ಗದರ್ಶಿ ಸೂತ್ರ ರೂಪಿಸಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿ ಮೂರು ತಿಂಗಳ ಒಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಇಂದು ಸೋಮವಾರ ರಾಷ್ಟ್ರೀಯ ಅಲ್ಪಸಂಖ್ಯಾಕ ಆಯೋಗಕ್ಕೆ (ಎನ್‌ಸಿಎಂ ಗೆ) ಸೂಚನೆ ನೀಡಿದೆ. 

Advertisement

ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೋಯ್‌ ನೇತೃತ್ವದ ಪೀಠವು ಈ ವಿಷಯದಲ್ಲಿ, “ಅರ್ಜಿದಾರರಾಗಿರುವ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿ‌ನಿ ಉಪಾಧ್ಯಾಯ ಅವರು ಅಲ್ಪಸಂಖ್ಯಾಕ ಆಯೋಗಕ್ಕೆ ಮರು ಅರ್ಜಿ ಸಲ್ಲಿಸಬೇಕು; ಮತ್ತು ಇಂದು ಸೋಮವಾರದಿಂದ ಮೂರು ತಿಂಗಳ ಒಳಗೆ ಆಯೋಗ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಹೇಳಿತು.

“ರಾಷ್ಟ್ರವ್ಯಾಪಿ ಜನಸಂಖ್ಯಾ ಅಂಕಿಅಂಶಗಳಿಗೆ ಬದಲಾಗಿ ರಾಜ್ಯದಲ್ಲಿನ ಒಂದು ನಿರ್ದಿಷ್ಟ ಸಮುದಾಯದ ಜನಸಂಖ್ಯೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಲ್ಪಸಂಖ್ಯಾಕ ಪದವನ್ನು ಪುನರ್‌ ವ್ಯಾಖ್ಯಾನಿಸುವ ಅಗತ್ಯವಿದೆ’ ಎಂದು ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ ಆಗ್ರಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next